ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗೊಳ್ತಮಜಲ್ ಸಿ ಒಕ್ಕೂಟದ ತ್ರೈಮಾಸಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

0
13

ಕಲ್ಲಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಗೊಳ್ತಮಜಲ್ ಸಿ ಒಕ್ಕೂಟದ ತ್ರೈಮಾಸಿಕ ಸಭೆಯು ಜೂಲೈ 5 ರವಿವಾರ ಶಂಭುಗ ಯುವಕ ಮಂಡಲ ಸಭಾಭವನದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಉಪಾಧ್ಯಕ್ಷೆ ದೀಪ್ತಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕ ಶುಕರಾಜ್ ಯೋಜನೆಯ ಗುಂಪುಗಳ ಕಾರ್ಯ, ಜವಾಬ್ದಾರಿ, ಗುಂಪುಗಳಿಗೆ ನೀಡಲಾಗುವ ಸಾಲ ಸೌಲಭ್ಯಗಳು, ಆರೋಗ್ಯ ವಿಮೆ ಹಾಗೂ ಪ್ರಸಕ್ತ ಸಾಲಿನಲ್ಲಿ ಗೊಳ್ತಮಜಲ್ ಒಕ್ಕೂಟ ವ್ಯಾಪ್ತಿಯಲ್ಲಿ ಯೋಜನೆಯಿಂದ ದೊರೆತ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಉಪಾಧ್ಯಕ್ಷೆ ದೀಪ್ತಿ ಹಾಗೂ ನಿಕಟ ಪೂರ್ವ ಅಧ್ಯಕ್ಷ ಶೇಖರ್ ಇವರ ಉಪಸ್ಥಿತಿಯಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ವೀಣಾ ಶಂಭುಗ ,ಉಪಾಧ್ಯಕ್ಷರಾಗಿ ಮೋಹದಾಸ್, ಕಾರ್ಯದರ್ಶಿಯಾಗಿ ಶಾಂಭವಿ,ಜೊತೆ ಕಾರ್ಯದರ್ಶಿಯಾಗಿ ಹರೀಶ್ ,ಸಂಯೋಜಕರಾಗಿ ಬಬಿತ ರವರನ್ನು ಆಯ್ಕಮಾಡಲಾಯಿತು.

ವೇದಿಕೆಯಲ್ಲಿ ಒಕ್ಕೂಟ ಪದಾಧಿಕಾರಿಗಳಾದ ಮೋಹಿನಿ, ಮಮತಾ, ಸುಮಿತ್ರ ಶುಶೀಲಾ, ಕುಸುಮ ಒಕ್ಕೂಟ ಸೇವಾ ಪ್ರತಿನಿಧಿಗಳಾದ ವಿದ್ಯಾ ಹಾಗೂ ವಿಜಯ ಉಪಸ್ಥಿತರಿದ್ದರು.

ಸಭೆಯಲ್ಲಿ ಒಕ್ಕೂಟದ ಎಲ್ಲಾ ಸ್ವ ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here