ಅಳದಂಗಡಿ : ಅಳದಂಗಡಿ ಬರಾಯ ಅರಮನೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ವಾರ್ಷಿಕ ಮಹಾಲಯ ಕಾರ್ಯ ಹಾಗೂ ದೈವಗಳ ನೇಮೋತ್ಸವವು ಜುಲೈ 7ರಿಂದ 9ರವರೆಗೆ ಅತ್ಯಂತ ಶ್ರದ್ಧಾ-ಭಕ್ತಿಯಿಂದ ನಡೆಯಲಿದೆ.
ಜುಲೈ 7ರಂದು ಅರಸರು ಅಳದಂಗಡಿ ಅರಮನೆಯನ್ನು ಬಿಟ್ಟು ಬರಾಯ ಅರಮನೆಗೆ ಆಗಮಿಸುವುದರೊಂದಿಗೆ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ದೊರೆಯಲಿದೆ. ಜುಲೈ 8ರಂದು ಮಧ್ಯಾಹ್ನ ಮಹಾಲಯ ಕಾರ್ಯ ನಡೆಯಲಿದ್ದು, ರಾತ್ರಿ ನೆತ್ತರ ಮುಗುಳಿ ಹಾಗೂ ಪುರುಷರಾಯ ದೈವದ ನೇಮೋತ್ಸವ ಜರುಗಲಿದೆ.
ಜುಲೈ 9ರಂದು ರಾತ್ರಿ 7 ಗಂಟೆಗೆ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ಹಾಗೂ ರಾತ್ರಿ 11 ಗಂಟೆಗೆ ಮೂಜಿಲ್ನಾಯ ದೈವಗಳ ನೇಮೋತ್ಸವ ನಡೆಯಲಿದೆ.

