
ಕಲ್ಲಡ್ಕ : ಬಂಟ್ವಾಳ ತಾಲೂಕು ಬೋಳಂತೂರು ಗ್ರಾಮದ ನಾರಂಕೋಡಿ ವೆಂಕಪ್ಪ ಜಿ ರವರ ಮನೆಗೆ ಮಳೆಗೆ ಮರ ಬಿದ್ದು ಅಲ್ಪ ಮಟ್ಟದ ಹಾನಿ ಸಂಭವಿಸಿದ್ದು, ಕೂಡಲೆ ಮಾಹಿತಿ ತಿಳಿದ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ತಂಡದ ಸದಸ್ಯರು ಮರವನ್ನು ತೆರವುಗೊಳಿಸಿದರು.
ಘಟಕದ ಸದಸ್ಯರುಗಳಾದ ರವಿಚಂದ್ರ , ಗಣೇಶ ನಾಯ್ಕ, ದನಂಜಯ,ಹರಿಶ, ವೆಂಕಪ್ಪ ಸ್ಥಳೀಯರಾದ ಚರಣ್ ಹಮೀದ್ ಈ ಕಾರ್ಯದಲ್ಲಿ ಭಾಗವಹಿಸಿದ್ದರು.

