ಮೂಡುಬಿದಿರೆ : ಪುರಸಭಾ ವಾರ್ಡ್ ನಂಬರ್ 15ರ ಕಾಯರ್ ಗುಂಡಿಯಲ್ಲಿ ಕಾಂಕ್ರಿಟ್ ರಸ್ತೆಯ ಮೇಲೆಯೆ ಖಾಸಗೀ ಕಾಂಪೌಂಡ್ ನಿರ್ಮಾಣವಾಗಿದೆ. ಪುರಸಭಾ ನಿಯಮದ ಪ್ರಕಾರ ಘನ ವಾಹನಗಳ ಪ್ರವೇಶಕ್ಕೆ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಪುರಸಭಾ ವ್ಯಾಪ್ತಿಯ ರಸ್ತೆಯನ್ನು ಬಿಟ್ಟು 3 Feet ಜಾಗದ ಹೊರಕ್ಕೆ ಕಾಂಪೌಂಡ್ ನಿರ್ಮಿಸಬೇಕು ಎಂದು ನಿಯಮವಿದ್ದರು, ಆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕೌಂಪೌಂಡ್ ನಿರ್ಮಾಣವಾಗಿದೆ.
ಈ ಪ್ರದೇಶದ ಸ್ಥಳೀಯರು ಮೂರು ದಿನಗಳ ಹಿಂದೆಯೇ ಪುರಸಭೆಗೆ ದೂರು ನೀಡಿದ್ದರು ಕೂಡ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆಯ ಮೇಲೆಯೇ ಮನೆಗಳ ಕಾಂಪೌಂಡ್ ನಿರ್ಮಾಣ ಮಾಡಿದರೆ ದೊಡ್ಡ ವಾಹನಗಳು ಯಾವುದಾರ ಮೇಲೆ ಸಂಚಾರಿಸಬೇಕು ಎಂದು ಸ್ಥಳೀಯರ ಪ್ರಶ್ನೆಯಾಗಿದೆ.

