ಹಿಂದು ಜಾಗರಣ ವೇದಿಕೆಯಿಂದ ಗೋವಿಗೆ ಪುಣ್ಯ ಸಂಸ್ಕಾರ

0
19

ಮೂಡುಬಿದಿರೆ : ಸಮೀಪ ಸಾರ್ವಜನಿಕ ರಸ್ತೆಯೊಂದರಲ್ಲಿ ವಾಹನಕ್ಕೆ ಢಿಕ್ಕಿಯಾದ ಒಂದು ದನ ಮತ್ತು ಅದರ ಕರುವಿಗೆ ಹಿಂದೂ ಜಾಗರಣ ವೇದಿಕೆಯವರಿಂದ ಸೂಕ್ತ ಸ್ಪಂದನ ದೊರೆತಿದ್ದು ನಾಗರಿಕರ ಪ್ರಶಂಸೆಗೊಳಪಟ್ಚಿದೆ.

ಅಪರಿಚಿತ ವಾಹನವೊಂದು ದನ ಮತ್ತು ಕರುವಿಗೆ ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಅದರ ತಾಯಿ ದನಕ್ಕೆ ಆಂತರಿಕವಾಗಿ ಗಾಯವಾಗಿತ್ತು. ಹಾಗಿದ್ದೂ ದನವನ್ನು ಎತ್ತಿ ಕೊಂಡೊಯ್ದು ಅದಕ್ಕೆ ಬೇಕಾದ ಪ್ರಥಮ ಚಿಕಿತ್ಸೆಯನ್ನು ಮಾಡಿಸಿದ ತಂಡವು ಅದನ್ನು ಬದುಕಿಸುವು ಸಲುವಾಗಿ ವೈದ್ಯರಿಂದ ಹೆಚ್ಚಿನ ಚಿಕಿತ್ಸೆಗೆ ಮನವಿ ಮಾಡಿದ್ದರು.

ದನಕ್ಕೆ ಗಂಭೀರ ಹೊಡೆತವಾಗಿದ್ದನ್ನು ಗಮನಿಸಿದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕೆಂಬ ನಿರ್ಧಾರಕ್ಕೂ ಬಂದಿದ್ದರು. ದುರಾದೃಷ್ಟವಶಾತ್ ಆ ದನವು ಕೂಡಾ ಸಾವನ್ನಪ್ಪಿತು. ಹಿಂದೂ ಜಾಗರಣ ವೇದಿಕೆಯ ಮೂಡುಬಿದಿರೆಯ ಕಾರ್ಯಕರ್ತರು ವಾಹನದ ಢಿಕ್ಕಿಗೆ ಸಾವನ್ನಪ್ಪಿದ ದನ ಮತ್ತು ಕರುವಿನ ದಫನ ಕಾರ್ಯವನ್ನು ಶ್ರದ್ಧಾಪೂರ್ವಕವಾಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖರಾದ ಸಂದೀಪ್ ಹೆಗ್ಡೆ ನಗರ ಸಂಯೋಜಕರಾದ ನಾಗೇಂದ್ರ, ತಾಲೂಕು ಪ್ರಮುಖರಾದ ಜಗದೀಶ್ ಬೆದ್ರ ಶಿಶಿರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here