ಮೂಡುಬಿದಿರೆಯಲ್ಲಿ ಉಚಿತ ಹೊಲಿಗೆ ಕೌಶಲ್ಯ ತರಬೇತಿ ಉದ್ಘಾಟನೆ

0
17

ಮೂಡುಬಿದಿರೆ : ದಿನಾಂಕ 08-07-2026 ರಂದು ಬ್ಯಾಂಕ್ of ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು,ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ್ ಹಾಗೂ ವೀಚೀಸ್ ಕೌಶಲ್ಯ ಕೇಂದ್ರ ಮೂಡಬಿದರೆ ಇವರ ಜಂಟಿ ಆಶ್ರಯದಲ್ಲಿ 2 ತಿಂಗಳ ಉಚಿತ ಹೊಲಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನೆ ವೀಚಿಸ್ ಕೌಶಲ್ಯ ಕೇಂದ್ರದ ಸಭಾಂಗಣದಲ್ಲಿ ನಡೆಯಿತು.

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಕಾರ್ಯದರ್ಶಿ B ರಾಜೇಂದ್ರ ರೈ ತರಬೇತಿ ಉದ್ಘಾಟಿಸಿ “ಹೊಲಿಗೆ ಕಲಿತು ಸ್ವ ಉದ್ಯೋಗ ಮಾಡಿದರೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ತನ್ನ ಸಂಸಾರದ ಖರ್ಚು ವೆಚ್ಚ ಸರಿದೂಗಿಸಲು ಸಹಾಯವಾಗುತ್ತದೆ” ಎಂದರು.ಭಾರತೀಯ ವಿಕಾಸ ಟ್ರಸ್ಟ್ ನ ಕಾರ್ಯಕ್ರಮ ವ್ಯವಸ್ತಾಪಕಾರದ ಜೀವನ್ ಕೊಲ್ಯ ಮಾತಾಡುತ ಕೌಶಲ್ಯ ತರಬೇತಿ ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಶಕ್ತಿ ನೀಡುತ್ತದೆ, ಮಹಿಳೆಯರು ಸ್ವ ಉದ್ಯೋಗದ ಅವಕಾಶ ಬಂದಾಗ ಅದನ್ನು ಸದುಪಯೋಗಪಡಿಸಿಕೊಳ್ಳಲು ಕರೆನೀಡಿದರು. ವಿಜಯ ಗ್ರಾಮೀಣ ಅಬಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಾಣಾಧಿಕಾರಿಯಾದ ಜ್ಯೋತಿರಾಜ್ ಇವರು ಸ್ವ ಉದ್ಯೋಗ ಮಾಡಲು ಬ್ಯಾಂಕ್ ನಿಂದ ಸಿಗುವ ಸಾಲ ಸೌಲಭ್ಯ ಗಳ ಮಾಹಿತಿ ನೀಡಿದರು.

ವೇದಿಕೆಯಲ್ಲಿ ವೀಚೀಸ್ ಕೌಶಲ್ಯ ಕೇಂದ್ರದ ನಿರ್ದೇಶಕಿ ಶುಭ ಲಕ್ಷ್ಮೀ, ಸಂಪನ್ಮೂಲ ವ್ಯಕ್ತಿ ಅನಿತಾಆನಂದ್ ಉಪಸ್ಥಿತರಿದ್ದರು. ಶಿಬಿರಾರ್ಥಿ ಪ್ರಿಯ ಶೆಟ್ಟಿ ಸ್ವಾಗತಿಸಿ ಧನ್ಯವಾದಗೈದರು. ಮೂಡಬಿದರೆ ವ್ಯಾಪ್ತಿಯ 30 ಮಹಿಳೆಯರು 2 ತಿಂಗಳ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here