ಪ್ರಕೃತಿಯ ನಾಶ ಜಗತ್ತು ಸರ್ವನಾಶ : ನಾರಾಯಣ ಗುರುಗಳ ಸಂದೇಶ ನೆನಪಿಸಿದ ದಿನೇಶ್ ಸುವರ್ಣ ರಾಯಿ

0
17

ಕಲ್ಲಡ್ಕ : “ಪ್ರಕೃತಿಯ ನಾಶ ಜಗತ್ತು ಸರ್ವನಾಶ” ಎಂಬುದು ಬ್ರಹ್ಮಶ್ರೀ ನಾರಾಯಣ ಗುರುಗಳ ಪರಿಸರ ಸಂರಕ್ಷಣೆಯ ಸಂದೇಶದ ಸಾರವಾಗಿದೆ. ಪ್ರಕೃತಿಯನ್ನು ನಾಶ ಮಾಡಿದರೆ ಅದರ ದುಷ್ಪರಿಣಾಮ ಇಡೀ ಮಾನವಕುಲ ಹಾಗೂ ಜೀವಜಗತ್ತಿನ ಮೇಲೆ ಬೀಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರಕೃತಿಯನ್ನು ಪೂಜ್ಯಭಾವದಿಂದ ಕಾಪಾಡಿ, ಉಳಿಸಿ, ಬೆಳೆಸಬೇಕು ಎಂದು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಹೇಳಿದರು.

ಅವರು ಜುಲೈ 9 ಗುರುವಾರ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ಗುರುತತ್ವವಾಹಿನಿ 70ನೇ ಮಾಲಿಕೆ ಕಾರ್ಯಕ್ರಮದಲ್ಲಿ, ವೀರಕಂಭ ಗ್ರಾಮದ ಗೋಳಿಮಾರು ಜನಾರ್ಧನ ಪೂಜಾರಿಯವರ ನೂತನ ಗೃಹಪ್ರವೇಶ “ಬ್ರಹ್ಮಶ್ರೀ” ನಿವಾಸದಲ್ಲಿ ಗುರುಸಂದೇಶ ನೀಡುತ್ತಾ ಮಾತನಾಡಿದರು.

ದೇವರನ್ನು ಹೇಗೆ ನಿತ್ಯ ಭಕ್ತಿಯಿಂದ ಆರಾಧಿಸುತ್ತೇವೆಯೋ, ಅದೇ ರೀತಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಪ್ರತಿದಿನ ಸ್ಮರಿಸಬೇಕು. ಗುರುಗಳು ಸಮಾಜದಲ್ಲಿ ತಂದ ಸಾಮಾಜಿಕ ಕ್ರಾಂತಿಯಿಂದಲೇ ಇಂದು ನಾವು ತಲೆ ಎತ್ತಿ ಬದುಕುವಂತಾಗಿದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.

ಗುರು ಸಂದೇಶ ಕಾರ್ಯಕ್ರಮದ ವೇದಿಕೆಯಲ್ಲಿ ಬಿಲ್ಲವ ಸಂಘ ವೀರಕಂಭ ಗ್ರಾಮ ಬಿಲ್ಲವ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಜಯಪ್ರಕಾಶ್ ತೆಕ್ಕಿಪಾಪು, ಶೇಖರ್ ನರಿಕೊಂಬು, ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಮನೆ ಮಾಲಕರಾದ ಜನಾರ್ದನ ಪೂಜಾರಿ, ಚೇತನ, ಅರ್ಜುನ್, ಹರ್ಷ, ಯುವವಾಹಿನಿ ರಿ.ಬಂಟ್ಟಾಳ ಘಟಕದ ಪ್ರಥಮ ಉಪಾಧ್ಯಕ್ಷರಾದ ನಿಕೇಶ್ ಕೋಟ್ಯಾನ್,ದ್ವಿತೀಯಉಪಾಧ್ಯಕ್ಷರಾದ ಹರೀಶ್ ಅಜೆಕಲಾ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಚಿನ್ನಾ ಕಲ್ಲಡ್ಕ , ಶೈಲೇಶ್ ಕುಚಿಗುಡ್ಡೆ, ನವೀನ್ ಪೂಜಾರಿ ಕಾರಾಜೆ, ಸಂಘಟನಾ ಕಾರ್ಯದರ್ಶಿಯಾದ ಸುನಿತಾ ನಿತಿನ್ ಮಾರ್ನಬೈಲ್.
ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರಾ, ಅರುಣ್ ಮಹಾಕಾಳಿಬೆಟ್ಟು,ನಾಗೇಶ್ ಪೊನ್ನೋಡಿ. ಮತ್ತು ಸದಸ್ಯರಾದ ಯಶೋಧರ್ ಕಡಂಬಲಿಕೆ, ರಂಜಿತ್ ನರಿಕೊಂಬು, ಉದಯ್ ಮೇನಾಡು, ಸುದೀಪ್ ಸಾಲ್ಯಾನ್ ರಾಯಿ, ವಿಘ್ನೇಶ್ ಬೊಳ್ಳಾಯಿ , ಸತೀಶ್ ಬಾಯಿಲ , ಯತೀಶ್ ಬೊಳ್ಳಾಯಿ, ಸಾತ್ವಿಕ್ ದೇರಾಜೆ, ಕಾರ್ತಿಕ್ ದೇರಾಜೆ, ಜನಾರ್ದನ ಪೂಜಾರಿಯವರ ಕುಟುಂಬಸ್ಥರು, ಅಭಿಮಾನಿಗಳು,ಮತ್ತಿತರರು ಉಪಸ್ಥಿತರಿದ್ದರು.

ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿದರು, ನಾರಾಯಣ ಗುರುತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು ಮಹೇಶ್ ಬೊಳ್ಳಾಯಿ ವಂದಿಸಿದರು.

LEAVE A REPLY

Please enter your comment!
Please enter your name here