ಜುಲೈ 12 ಕಲಾಕುಂಚ ಕೇರಳ ಗಡಿನಾಡ ಘಟಕದಿಂದ ಕುಂಬಳೆಯ ಚಾರಿತ್ರಿಕ ಮಹತ್ವ ಉಪನ್ಯಾಸ

0
16

ದಾವಣಗೆರೆ : ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಘಕಟದಿಂದ ಜುಲೈ 12 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಕುಂಬಳೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸಭಾಂಗಣದಲ್ಲಿ ಕುಂಬಳೆಯ ಚಾರಿತ್ರಿಕ ಮಹತ್ವ, ಕಾಸರಗೋಡಿನ ಅಸ್ಮಿತೆ ಸರಣಿ ಉಪನ್ಯಾಸ ಮಾಲಿಕೆ 6ನೇ ಭಾಗ ನಡೆಯಲಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಸಮಾರಂಭದ ಉದ್ಘಾಟನೆಯನ್ನು ಕಲಾರತ್ನ ಶಂನಾಡಿಗ ಕುಂಬಳೆ ಇವರು ನೆರವೇರಿಸಲಿದ್ದಾರೆ. ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್‌ರವರು ವಹಿಸಿಕೊಳ್ಳಲಿದ್ದಾರೆ. ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ನೂತನ ಅಧ್ಯಕ್ಷರಾದ ಶ್ರೀಮತಿ ರಾಧಾಮಣಿ ರಾವ್ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ.

ಅಂದು ಬೆಳಿಗ್ಗೆ 10.30ಕ್ಕೆ ಭಗವದ್ಗೀತಾ ಪಾರಾಯಣ ನಡೆಯಲಿದ್ದು, 11 ಗಂಟೆಗೆ ವಿಚಾರ ಗೋಷ್ಠಿ ನಡೆಯಲಿದೆ. ಕುಂಬಳೆಯ ಚಾರಿತ್ರಿಕ ಮಹತ್ವದ ಇತಿಹಾಸ ಪರಂಪರೆಯ ಈ ಸಮಾರಂಭಕ್ಕೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಮಹತ್ವಪೂರ್ಣ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಪದಾಧಿಕಾರಿಗಳು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here