ಯಕ್ಷಗಾನದ ಪೂಕಳ ಲಕ್ಷ್ಮೀನಾರಾಯಣ ಭಟ್ ಮತ್ತು ಬಾಯಾರು ರಮೇಶ್ ಶೆಟ್ಟರಿಗೆ ಕಾಂತಾವರ ಯಕ್ಷದೇಗುಲ ಪ್ರಶಸ್ತಿ

0
7

ಕಾಂತಾವರ : ಕಾಂತಾವರದ ಯಕ್ಷದೇಗುಲ ಸಂಸ್ಥೆಯು ಕಳೆದ ಇಪ್ಪತ್ತಮೂರು ವರ್ಷಗಳಿಂದ ಆಸಕ್ತರಿಗೆ ಉಚಿತವಾಗಿ ಯಕ್ಷ ಶಿಕ್ಷಣ, ಯಕ್ಷಗಾನ ಶಿಬಿರ, ಚಿಣ್ಣರ ಆಟ, ಪ್ರತಿಬಾ ಪುರಸ್ಕಾರ, ಗೌರವ ಸನ್ಮಾನ, ಅಗಲಿದ ಕಲಾವಿದರ ಸಂಸ್ಮರಣೆ ಮುಂತಾದ ಕಲಾಸೇವೆ ಮಾಡುತ್ತಾ ಬೆಳೆದ ಸಂಸ್ಥೆಯು ಪ್ರತಿ ವರ್ಷ ವಾರ್ಷಿಕ ಯಕ್ಷೋಲ್ಲಾಸ ಎಂಬ ಶೀರ್ಷಿಕೆಯಲ್ಲಿ ಯಶಸ್ವಿ ಕಾರ್ಯಕ್ರಮ ಮಾಡುತ್ತಾ ಬಂದಿದೆ.

ಈ ವರ್ಷವೂ ಇದೇ ಜುಲೈ ಇಪ್ಪತ್ತಾರರಂದು ಇಪ್ಪತ್ತ ನಾಲ್ಕನೇ ವಾರ್ಷಿಕ ಸಮಾರಂಭ ಜರಗಲಿದೆ.ಈ ಸಂದರ್ಭದಲ್ಲಿ ಯಕ್ಷಗಾನದ ಸಿಡಿಲಮರಿ ಖ್ಯಾತಿಯ ಪುತ್ತೂರು ದಿ.ಶ್ರೀಧರ ಭಂಡಾರಿ ಸ್ಮರಣಾರ್ಥ ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ಟರಿಗೆ ಹಾಗೂ ಯಕ್ಷಗಾನದ ಸವ್ಯ ಸಾಚಿ ಕಲಾವಿದ ಬಾಯಾರು ದಿ.ಪ್ರಕಾಶ್ಚಂದ್ರ ರಾವ್ ಸ್ಮರಣಾರ್ಥ ಬಾಯಾರು ರಮೇಶ್ ಶೆಟ್ಟರಿಗೆ ನಗದು ಪುರಸ್ಕಾರದೊಂದಿಗೆ ಯಕ್ಷದೇಗುಲ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಜೊತೆಗೆ ದಿನಪೂರ್ತಿ ಆಟ,ಕೂಟ ಬಯಲಾಟ ನಡೆಯಲಿದೆ ಎಂದು ಯಕ್ಷದೇಗುಲದ ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here