ಲ್ಯಾಟರೈಟ್ ಗಣಿಗಾರಿಕೆಯ ಹೆಸರಿನಲ್ಲಿ ಬಾಕ್ಸೈಟ್ನ ಅಕ್ರಮ ಸಾಗಾಣಿಕೆ

0
7

ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಹಾಗೂ ತೆಂಕ ಮಿಜಾರು ಇತ್ಯಾದಿ ಪ್ರದೇಶಗಳಲ್ಲಿ ನಡೆಯುತ್ತಿರುವ ಬಾಕ್ಸೈಟ್ನ ಅಕ್ರಮ ಗಣಿಗಾರಿಕೆ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯ ಈಗಾಗಲೇ ತಡೆಯಾಜ್ಞೆಯನ್ನು ನೀಡಿದ್ದರು. ಕೇಂದ್ರ ಸರಕಾರದ ಅನುಮತಿಯನ್ನು ತಪ್ಪಿಸಿಕೊಂಡು, ಕಾನೂನು ವಂಚನೆಯನ್ನು ನಡೆಸಿ ಬಾಕ್ಸೈಟ್ ಅನ್ನು ಲ್ಯಾಟರೈಟ್ ಹೆಸರಿನಲ್ಲಿ ವಂಚಿಸಿ ಅಕ್ರಮ ಗಣಿಗಾರಿಕೆಗೆ ರಾಜ್ಯ ಸರ್ಕಾರ ಅನುಮತಿಯನ್ನು ನೀಡಿದೆ.

ಕೇಂದ್ರ ಸರಕಾರದ ಅವಶ್ಯಕ ಅನುಮತಿ ಪಡೆಯದೆ ಗಣಿಗಾರಿಕೆಗೆ ಲೀಸ್ ನೀಡುವುದು, ಖನಿಜ ಮತ್ತು ಗಣಿಗಾರಿಕೆ ಅಧಿನಿಯಮದ ವಿರುದ್ಧವಾಗಿದೆ ಮಾತ್ರವಲ್ಲ ಉಚ್ಚ ನ್ಯಾಯಾಲಯದ ಆದೇಶವನ್ನು ವಿರೋಧಿಸುವಂಥದ್ದಾಗಿದೆ.

ತಕ್ಷಣ ಖನಿಜ ಮತ್ತು ಗಣಿಗಾರಿಕೆ ನಿಗಮ, ತಾಲೂಕು ಮತ್ತು ಜಿಲ್ಲಾ ದಂಡಾಧಿಕಾರಿಗಳು ನಡೆಯುತ್ತಿರುವ ಅಕ್ರಮ, ವಂಚನೆ, ಅನುಮತಿ ರಹಿತ ಗಣಿಗಾರಿಕೆಯನ್ನು ನಿಲ್ಲಿಸಿ ಕಾನೂನು ಉಲ್ಲಂಘನೆಯನ್ನು ತಡೆಯಬೇಕಾಗಿದೆ ಎಂದು ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘದ ಕಾರ್ಯದರ್ಶಿ ಬೆನೆಡಕ್ಟ್ ಫೆರ್ನಾಂಡಿಸ್ ಹಾಗೂ ಪ್ರಕಾಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದರು.

ವರದಿ ರಾಯಿ ರಾಜ ಕುಮಾರ್

LEAVE A REPLY

Please enter your comment!
Please enter your name here