ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬಂಟ್ವಾಳ ಇಲ್ಲಿ ಪರಿಸರ ದಿನಾಚರಣೆ ಅಂಗವಾಗಿ ದಿನಾಂಕ – 9.07.2026 ರಂದು ಗಿಡನಾಟಿ ಕಾರ್ಯಕ್ರಮ ನಡೆಸಲಾಯಿತು. ಅಧ್ಯಕ್ಷತೆಯನ್ನು ಬಂಟ್ವಾಳ ಉಪ ಅರಣ್ಯ ವಲಯಾಧಿಕಾರಿಗಳಾದ ಶ್ರೀಯುತ ಕೃಷ್ಣ ಮತ್ತು ಶ್ರೀಯುತ ಪ್ರಕಾಶ್ ಶೆಟ್ಟಿ ವಹಿಸಿದರು.
ಪರಿಸರ ನಾಶದಿಂದ ಉಂಟಾಗುವ ದುಷ್ಪಾರಿಣಾಮವನ್ನು ವಿವಿಧ ನಿದರ್ಶನದ ಮೂಲಕ ತಿಳಿಯ ಪಡಿಸಿದರು. ಪರಿಸರವನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಗಿಡ ನೆಟ್ಟು ಪರಿಸರ ರಕ್ಷಣೆ ಮಾಡಿ ಎಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕ ಹರಿಪ್ರಸಾದ್ ಅವರ ಮುತುವರ್ಜಿಯಲ್ಲಿ, ಶಾಲಾ ಆವರಣದಲ್ಲಿ ಗಿಡ ನಾಟಿ ನಡೆಸಲಾಯಿತು. ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು ಗಿಡ ನೆಟ್ಟು ಪೋಷಿಸುವುದರಿಂದ ಭೂಮಿಯ ಸಮತೋಲನ ಸಾಧ್ಯ ಎಂದು ಮಾತನಾಡುತ್ತ, ಪರಿಸರ ದಿನಾಚರಣೆಯ ಉದ್ಧೇಶದ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಂದ ವಿವಿಧ ಪ್ರಕೃತಿ ಗೀತೆ, ಪರಿಸರ ಸಂಬಂಧಿ ನೃತ್ಯ ಕಾರ್ಯಕ್ರಮಗಳು ನಡೆಯಿತು. ಸಂಘದ ಸದಸ್ಯರು, ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿಯಾದ ಚೈತ್ರ ಶೆಟ್ಟಿ, ಪೂರ್ವಪ್ರಾಥಮಿಕ ವಿಭಾಗದ ಸಂಯೋಜಕಿಯಾದ ವೀಣಾ ದೇವಾಡಿಗ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕುಮಾರಿ ಕೀರ್ತನಾ ಟಿ.ಕೆ ಸ್ವಾಗತಿಸಿದರು, ಅನ್ವಿತಾ ಕೆ.ವಿ ವಂದಿಸಿ , ಕುಮಾರಿ ಮಿಥಾಲಿ ವೈ ಕಾರ್ಯಕ್ರಮವನ್ನು ನಿರೂಪಿಸಿದರು.

