ಮೂಡುಬಿದಿರೆ : ಪಡು-ಮೂಡುಕೊಣಾಜೆಯ ಜವನರ ಆಶ್ರಯದಲ್ಲಿ ಮೂರನೇ ವರ್ಷದ ‘ಕೆಸರ್ ಡೊಂಜಿ 2026’ ಕಾರ್ಯಕ್ರಮವು ಪಡುಕೊಣಾಜೆಯ ದೊಡ್ಡಮನೆ ಬಾಕ್ಯಾರುಗದ್ದೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಪುರುಷರು –ಮಹಿಳೆಯರು ಹಾಗೂ ಮಕ್ಕಳಿಗೆ ಕೆಸರಿನ ಗೊಬ್ಬು ಸ್ಪರ್ಧೆ ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಅಡ್ಡಹಲಗೆ ಹಾಗೂ ಕನಹಲಗೆ ವಿಭಾಗದಲ್ಲಿ ಅತಿಹೆಚ್ಚು ಬಹುಮಾನಗಳನ್ನು ಪಡೆದು ಚಾಂಪಿಯನ್ ಆಗಿರುವ ಬೋಲಾರದ ‘ಕಾಳೆ’ ಎಂಬ ಕಂಬಳದ ಕೋಣವನ್ನು ಸನ್ಮಾನಿಸಲಾಗುವುದು.
ಪಡು-ಮೂಡುಕೊಣಾಜೆ, ಮರಿಯಾಡಿ, ಶಿರ್ತಾಡಿ, ಅಳಿಯೂರು, ವಾಲ್ದಾಡಿ ಹಾಗೂ ಜೋಗೊಟ್ಟು ಗ್ರಾಮಸ್ಥರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಪುರುಷರಿಗೆ ಹಗ್ಗಜಗ್ಗಾಟ ಹಾಗೂ ವಾಲಿಬಾಲ್ ಸ್ಪರ್ಧೆಗಳು, ಮಹಿಳೆಯರಿಗೆ ತ್ರೊಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ.
ಹೆಚ್ಚಿನ ಮಾಹಿತಿಗಾಗಿ ಆನಂದ ಕೆ. ಕಂಚರ್ಲಗುಡ್ಡೆ (8970508269), ಸುಜಿತ್ ಆಚಾರ್ಯ (9663610376), ತೇಜಸ್ ಶೆಟ್ಟಿ (9945124620) ಹಾಗೂ ವಿಶ್ವನಾಥ್ ಕೊಟ್ಯಾನ್ (9964339301) ಅವರನ್ನು ಸಂಪರ್ಕಿಸಬಹುದಾಗಿದೆ.
ಸತೀಶ್ ಹೊಸ್ಮಾರ್ , ಸಂಪತ್ ಮೂಡುಬಿದಿರೆ ,ಅಶ್ವತ್ ಆನೆಗುಡ್ಡೆ ವಿಶೇಷ ನಿರೂಪಣೆಯನ್ನು ಮಾಡಲಿದ್ದಾರೆ.

