ಅಮೃತ ಭಾರತಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳ ಟ್ಯಾಲೆಂಟ್ ಶೋ ಕಾರ್ಯಕ್ರಮ ಮತ್ತು ಹಾಸ್ಟೆಲ್ ಸ್ಟೂಡೆಂಟ್ಸ್ ಕೌನ್ಸಿಲ್ ಪದಗ್ರಹಣ ಸಮಾರಂಭ

0
10

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳ ಟ್ಯಾಲೆಂಟ್ ಶೋ ಕಾರ್ಯಕ್ರಮ ಮತ್ತು ಹಾಸ್ಟೆಲ್ ಸ್ಟೂಡೆಂಟ್ಸ್ ಕೌನ್ಸಿಲ್ ಪದಗ್ರಹಣ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ನೆರವೇರಿತು.

ಹಾಸ್ಟೆಲ್ ಕಮಿಟಿ ಗೌರವಾಧ್ಯಕ್ಷರಾದ ಶ್ರೀ ಯೋಗೀಶ್ ಭಟ್ ರವರು ಕಾರ್ಯಕ್ರಮ ಉದ್ಘಾಟಿಸಿ , ಮಾತನಾಡಿ ಮಾನವರಾಗಿ ನಾವು ಬೇರೆಯವರಿಗೆ ಸಹಾಯ ಮಾಡಬೇಕು ಆದರೆ ಅವರಿಂದ ಪ್ರತಿಫಲವಾಗಿ ಏನನ್ನೂ ನಿರೀಕ್ಷಿಸಾಬಾರದು . ವ್ಯಕ್ತಿಗಳು ತಮ್ಮಲ್ಲಿ ಹವ್ಯಾಸಗಳನ್ನು ಬೆಳೆಸಿಕೊಳ್ಳ ಬೇಕು ಅವು ನಮ್ಮ ಮನಕ್ಕೆ ಸಂತೋಷ ನೀಡುತ್ತವೆ ಎಂದರು.

ಅಮೃತ ಭಾರತಿ ಟ್ರಸ್ಟ್ ನ ಅಧ್ಯಕ್ಷರಾದ ಸಿ ಎ ಎಂ. ರವಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗುರುದಾಸ್ ಶೆಣೈ, ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಸತೀಶ್ ಪೈ , ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾದ ರಾಜೇಶ್ ನಾಯಕ್ , ಟ್ರಸ್ಟಿ ವಿಷ್ಣುಮೂರ್ತಿ ನಾಯಕ್ , ಪಿ. ಆರ್. ಓ. ವಿಜಯ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಶಕುಂತಲಾ ಅಪರ್ಣಾ ಆಚಾರ್ , ಸಂಯೋಜಕಿ ಸುಗೀತಾ , ಚೀಫ್ ವಾರ್ಡನ್ ವಿರೂಪಾಕ್ಷ, ಉಪಸ್ಥಿತರಿದ್ದರು.

ಪ್ರಾಂಶುಪಾಲ ಪ್ರಕಾಶ್ ಜೋಗಿ ಪ್ರತಿಜ್ಞಾ ವಿಧಿ ಭೋದಿಸಿದರು. ನಂತರ ವಿದ್ಯಾರ್ಥಿ ಗಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಿದರು. ನಿಲಯ ಪಾಲಕರು , ರೆಸಿಡೆನ್ಸಿಯಲ್ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here