ಬಂಟ್ವಾಳ, ಜು.13: ಶ್ರೀ ರುದ್ರಪಠಣ ಸಮಿತಿ, ಬಂಟ್ವಾಳ ವತಿಯಿಂದ ಮಾಸಿಕ ಕೃಷ್ಣ ಪಕ್ಷ ತ್ರಯೋದಶಿ ಪ್ರದೋಷ ಪುಣ್ಯಕಾಲದ ಅಂಗವಾಗಿ ಸಾಮೂಹಿಕ ಶ್ರೀ ಶತರುದ್ರ ಪಾರಾಯಣ ಕಾರ್ಯಕ್ರಮವು ಅಮೂಟೂರಿನ ಕೆದ್ಲಾ ಶ್ರೀನಿವಾಸ ಹೊಳ್ಳ ಅವರ ನಿವಾಸದಲ್ಲಿ ಭಾನುವಾರ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ಮಾರ್ಗದರ್ಶನದಲ್ಲಿ ವೇದಘೋಷದೊಂದಿಗೆ ಶ್ರೀ ರುದ್ರಪಾರಾಯಣ ನಡೆಯಿತು. ಭಕ್ತರು ಶಿವನಾಮ ಸ್ಮರಣೆ ಹಾಗೂ ರುದ್ರಮಂತ್ರ ಪಠಣದ ಮೂಲಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಿಭಾವದಿಂದ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಸಮಿತಿಯ ಸಂಚಾಲಕ ಎ. ರವಿಶಂಕರ ಮಯ್ಯ, ಶಾಂತರಾಮ ರಾವ್ ಎಸ್.ಬಿ., ರಾಮಚಂದ್ರ ಮಯ್ಯ, ಅರ್ಬಿ ಕೃಷ್ಣಕುಮಾರ್ ಸೋಮಯಾಜಿ, ಎಂ. ಜಯರಾಮ ಮಯ್ಯ, ಕೆ. ಪರಮೇಶ್ವರ ರಾವ್, ಸೀತಾರಾಮ ಮಯ್ಯ, ಕೆ. ರಘುರಾಮ ರಾವ್, ಎನ್. ಶಾಂತಕುಮಾರ ಮಯ್ಯ, ಈ. ದನೇಶ್ವರ ರಾವ್, ರವಿಶಂಕರ ಕಾರಂತ, ನಾರಾಯಣ ಮಯ್ಯ (ಭಂಡಾರಿ ಬೆಟ್ಟು), ನವೀನ ರಾವ್, ಕೆ. ಮಿಥುನ ರಾವ್, ಸುಧಾಕರ ತುಂಗ, ಗಣೇಶ್ ಕಾರಂತ, ಕೆ. ರಮೇಶ್ ಹೊಳ್ಳ, ಎ.ಪಿ. ರಾವ್, ಹರೀಶ್ ರಾವ್, ಅಶ್ವಿನಿ ಭಟ್, ನವನೀತ್ ರಾವ್ ಸೇರಿದಂತೆ ಅನೇಕ ವೇದಪಂಡಿತರು ಹಾಗೂ ಭಕ್ತರು ಶ್ರೀ ಶತರುದ್ರ ಪಾರಾಯಣದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಮಹಾಪೂಜೆ, ಪ್ರಾರ್ಥನೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿವಾರಾಧನೆಯ ಪುಣ್ಯಫಲವನ್ನು ಪಡೆದರು.

