ಮುದ್ದಡ್ಕ, : ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ರುದ್ರ ಪಠಣ ಸಮಿತಿ, ಬಂಟ್ವಾಳ ವತಿಯಿಂದ ಸಾಮೂಹಿಕ ರುದ್ರ ಪಠಣ ಹಾಗೂ ವಿವಿಧ ವೇದಸೂಕ್ತಗಳ ಪಾರಾಯಣ ಭಕ್ತಿಭಾವದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ರುದ್ರ, ನಮಕ, ಚಮಕ, ಗಣಪತಿ ಸೂಕ್ತ, ವಿಷ್ಣು ಸೂಕ್ತ, ದೇವಿ ಸೂಕ್ತ, ರುದ್ರ ಸೂಕ್ತ, ಸೌರ ಸೂಕ್ತ, ಆಗಮರ್ಷಣ ಸೂಕ್ತ, ಪುರುಷ ಸೂಕ್ತ, ಪವಮಾನ ಸೂಕ್ತ, ಭಾಗ್ಯ ಸೂಕ್ತ, ಅಂಬೃಣಿ ಸೂಕ್ತ ಹಾಗೂ ಮಂತ್ರಪುಷ್ಪ ಸೇರಿದಂತೆ ವಿವಿಧ ವೇದಸೂಕ್ತಗಳನ್ನು ಸಾಮೂಹಿಕವಾಗಿ ಪಠಿಸಲಾಯಿತು.
ಸಜೀಪ ಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ಅವರ ಮಾರ್ಗದರ್ಶನದಲ್ಲಿ, ದೇವಾಲಯದ ಅರ್ಚಕರಾದ ರಘುರಾಮ ಭಟ್ ಹಾಗೂ ರಾಘವೇಂದ್ರ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಂಚಾಲಕ ಎ. ರವಿಶಂಕರ ಮೈಯ್ಯ, ಅರ್ಬಿ ಕೃಷ್ಣ ಕುಮಾರ ಸೋಮಯಾಜಿ, ರವಿಶಂಕರ್ ಕಾರಂತ್, ಶಾಂತರಾಮ ಎಸ್.ಬಿ., ಎನ್. ರಾಮಚಂದ್ರಮಯ್ಯ, ಶ್ರೀನಿವಾಸ ಹೊಳ್ಳ, ಸೀತಾರಾಮ ಮಯ್ಯ, ಕೆ. ಮಿಥುನ್ ರಾವ್, ನಾರಾಯಣ ಮಯ್ಯ (ಬಂಡಾರಿಬೆಟ್ಟು), ಎ. ದನೇಶ್ವರ ರಾವ್, ಎಂ. ಜಯರಾಮ ಮಯ್ಯ ಸೇರಿದಂತೆ ಅನೇಕರು ಭಾಗವಹಿಸಿದರು.
ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕುಲಾಲ್ ಹಾಗೂ ದೇವಾಲಯದ ಪ್ರಬಂಧಕಿ ಹೇಮಲತಾ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವೇದಘೋಷದ ನಡುವೆ ನಡೆದ ಈ ಧಾರ್ಮಿಕ ಕಾರ್ಯಕ್ರಮ ಭಕ್ತರಲ್ಲಿ ಆಧ್ಯಾತ್ಮಿಕ ಭಾವನೆಯನ್ನು ಮೂಡಿಸಿತು.

