ಡಿಟೆಕ್ಟಿವ್ ದಿವಾಕರ್’ ಚಿತ್ರೀಕರಣ ಸಂಪೂರ್ಣ; ಡಬ್ಬಿಂಗ್ ಕಾರ್ಯ ಆರಂಭ

0
41

ಕಾರ್ಕಳ: ವಿಭಾ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಅಮೃತ ಯು. ರೈ ಹಾಗೂ ಸುನಿಲ್ ಶೆಟ್ಟಿ ನಿರ್ಮಾಣದ ‘ಡಿಟೆಕ್ಟಿವ್ ದಿವಾಕರ್’ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸದ್ಯ ಚಿತ್ರತಂಡ ಡಬ್ಬಿಂಗ್ ಕಾರ್ಯದಲ್ಲಿ ನಿರತವಾಗಿದ್ದು, ಉಳಿದ ನಿರ್ಮಾಣೋತ್ತರ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸುತ್ತಿದೆ.

ಚಿತ್ರಕ್ಕೆ ಸುನಿಲ್ ಕಡ್ತಲ ನಿರ್ದೇಶನ ನೀಡಿದ್ದು, ವಿನೀಶಾ ಪೂಜಾರಿ ಮತ್ತು ಸಾಯಿನಾಥ್ ಪೆರ್ಡೂರು ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಸುನಿಲ್ ಕಡ್ತಲ, ಶಿವಾನಿ ನಾಯ್ಕ್ , ನಯನಾ ಸಾಲಿಯಾನ್, ಸಂಕೇತ್ ಕುಲಾಲ್ ಹಾಗೂ ಸುನಿಲ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕಥೆಯ ನಿರೂಪಣೆ ಮತ್ತು ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.

ಕಾರ್ಕಳ, ಉಡುಪಿ, ಮಂಗಳೂರು, ಚಿಕ್ಕಮಂಗಳೂರು, ಕಳಸ ಹಾಗೂ ಬೆಂಗಳೂರಿನ ವಿವಿಧ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸಂತೋಷ ಕುಲಾಲ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಕಾರ್ತಿಕ್ ಮೂಲ್ಕಿ ಹಾಗೂ ಮೋಹನ್ ಪಿ. ನಾಯಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಚಿತ್ರೀಕರಣ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಚಿತ್ರದ ಟೀಸರ್, ಹಾಡುಗಳು ಹಾಗೂ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.