ಕರ್ನಾಟಕ ರಾಜ್ಯ ಸರ್ಕಾರವು ಮಾದಕ ವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣುತೆ, ನೀತಿಯನ್ನು ಘೋಷಿಸಿದ್ದು ಮಾದಕ ದ್ರವ್ಯ ಮುಕ್ತ ರಾಜ್ಯವನ್ನಾಗಿ ಮಾಡಲು ನಿರಂತರ ಪ್ರಯತ್ನಿಸುತ್ತಿದೆ. ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಹೆಸರಿನಲ್ಲಿ ರಾಜ್ಯ ವ್ಯಾಪಿ ಮಾದಕ ದ್ರವ್ಯ ವಿರೋಧಿ ಅಭಿಯಾನ ಜೂನ್ ಮೂವತ್ತರಿಂದ ಆರಂಭವಾಗಿದೆ. ಇದರ ಮೂಲಕ ವಿದ್ಯಾರ್ಥಿಗಳು ಹಾಗೂ ಯುವ ಉದ್ಯೋಗಿಗಳನ್ನು ಮಾದಕ ವ್ಯಸನದಿಂದ ದೂರವಿರಲು ಪ್ರೇರೇಪಿಸುವ, ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸುವ ಉದ್ದೇಶವನ್ನು ಸಾಕಾರಗೊಳಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆ, ಸಮುದಾಯ ಹಾಗೂ ಆರೋಗ್ಯ ಇಲಾಖೆಗಳ ಮೂಲಕ ಜಾಗೃತಿ ಕಾರ್ಯಕ್ರಮ ಸತತವಾಗಿ ನಡೆಯುತ್ತಿದೆ. ಮಾದಕ ವಸ್ತುಗಳ ಅಕ್ರಮ ಜಾಲದ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮವೂ ಮುಂದುವರೆಯುತ್ತಿದೆ.

ನಗರ ಪೊಲೀಸ್ ಕಮಿಷನ್ ರೇಟ್ ವ್ಯಾಪ್ತಿಯಲ್ಲಿ 25 ನೇ ಸಾಲಿನಲ್ಲಿ ಒಟ್ಟು 717 ಏನ್ ಡಿ ಪಿ ಎಸ್ ಪ್ರಕರಣ, ಮೂಲಕ 231 ಮಾರಾಟಗಾರರು ಹಾಗೂ 723 ಸೇವಿಸುವವರು. 2026 ಜುಲೈವರೆಗೆ 26 ಎನ್‌ಡಿಪಿಎಸ್ ಪ್ರಕರಣ, ಮೂಲಕ 142 ಮಾರಾಟಗಾರರು ಹಾಗೂ 438 ಸೇವಿಸುವವರು ಒಳಗೊಂಡಿದ್ದಾರೆ.
ಕಾಲೇಜು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಒಟ್ಟು 63 ವಿದ್ಯಾರ್ಥಿಗಳು ಮಾದಕ ವಸ್ತು ಸೇವೆಸಿದ ಬಗ್ಗೆ ದಾಖಲಾಗಿರುತ್ತದೆ. ಒಟ್ಟು 275 ಶಿಕ್ಷಣ ಸಂಸ್ಥೆಗಳಲ್ಲಿ ಆಂಟಿ ಡ್ರಗ್ ಕಮಿಟಿಗಳನ್ನು ರಚಿಸಲಾಗಿದೆ. ಘೋಷಣಾ ಪತ್ರವನ್ನು ಪಡೆಯಲಾಗುತ್ತಿದೆ. ಹಾಗೂ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮ, ಪರೀಕ್ಷೆ, ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ದ ಕ ಜಿಲ್ಲಾ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವರದಿ ರಾಯಿ ರಾಜ ಕುಮಾರ್

