ಫಿಫಾ ವಿಶ್ವಕಪ್ ಫುಟ್ಬಾಲ್ 2026`ಮೆಸ್ಸಿ’ ಮೂರ್ತಿ ಚಿಕ್ಕದು, ಕೀರ್ತಿ ದೊಡ್ಡದು

0
3

ಜಗತ್ತಿನ ಅತ್ಯಂತ ಜನಪ್ರಿಯ ಫುಟ್ಬಾಲ್ ಕ್ರೀಡೆಯ 2026 ಫಿಫಾ ವಿಶ್ವಕಪ್ ಆಟವನ್ನು ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳು ಜಂಟಿಯಾಗಿ ಆಯೋಜಿಸಿವೆ. ವಿಶ್ವದಲ್ಲೇ ಮೊದಲ ಬಾರಿಗೆ 48 ದೇಶಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು ಒಟ್ಟು 104 ಪಂದ್ಯಗಳನ್ನು ಆಡಿಸಲಾಗಿದ್ದು ಪ್ರತಿ ಪಂದ್ಯದಲ್ಲೂ ಜಿದ್ದಾಜಿದ್ದಿ ಇಂದ ಕುಡಿದ ಈ ಪ್ರತಿಷ್ಠಿತ ಪಂದ್ಯಾವಳಿಯು ಇಡೀ ಜಗತ್ತನ್ನೇ ಮಂತ್ರ ಮುಗ್ಧಗೊಳಿಸಿ, ಇಂದು ನ್ಯೂಯಾರ್ಕ್ನಲ್ಲಿ ಅಂತಿಮ ಪಂದ್ಯ ನಡೆಯುತಿದ್ದು ಪ್ರೇಕ್ಷಕರು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿದೆ.

ಅರ್ಜೆಂಟೇನ ಹಾಗೂ ಸ್ಪೇನ್ ತಂಡಗಳು ಫೈನಲ್ ಪ್ರವೇಶಿಸಿವ ಮೂಲಕ ರೋಚಕ ಘಟ್ಟ ತಲುಪಿದೆ, ಇಡೀ ಜಗತ್ತೇ ಎದುರು ನೋಡುತ್ತಿರುವ ಜಗತ್ಪ್ರಸಿದ್ಧ ಶ್ರೇಷ್ಠ ಆಟಗಾರ ಮೆಸ್ಸಿ ಸಾಧನೆಯ ಬಗ್ಗೆ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಒಂದು ಸಾಮಾನ್ಯ ಕಾರ್ಮಿಕ ವರ್ಗದ ಕುಟುಂಬುದಲ್ಲಿ ಹುಟ್ಟಿ ಅಸಾಮಾನ್ಯ ಸಾಧನೆ ಮಾಡಿದ ಒಬ್ಬ ಜಗತ್ ಪ್ರಸಿದ್ಧ ಶ್ರೇಷ್ಠ ಪುಟ್ಟಲ್ ಅಟಗಾರ “ಲಿಯೋನೆಲ್ ಅಂಡ್ರೆಸ್ ಮೆಸ್ಸಿ” .

1987 ಜೂನ್ 24 ರಂದು ಅರ್ಜೆಂಟೀನಾದ ರೂಸಾರಿಯೋದಲ್ಲಿ ಜನಿಸಿದ ಮೆಸ್ಸಿ ಒಬ್ಬ ಸಾಮಾನ್ಯ ಆಟಗಾರನಲ್ಲ. ಮೂರ್ತಿ ಚಿಕ್ಕದಾದರೂ ಕೀರ್ತಿ ಮತ್ತು ಸಾಧನೆ ದೊಡ್ಡದಾದ, ಅದ್ಭುತ ಆಟದ ಕಲೆಯನ್ನು ಹೊಂದಿರುವ “ಜೀವಂತ ದಂತಕಥೆ”. ಫುಟ್ಬಾಲ್ ಇದ್ದಷ್ಟು ಕಾಲ ಮೆಸ್ಸಿ ಎಂಬ ಹೆಸರು ಅಮರವಾಗಿ ಉಳಿಯುತ್ತದೆ. ಅರ್ಜೆಂಟೀನಾದ ಸರ್ವಕಾಲಿಕ ಮಾಜಿ ಶ್ರೇಷ್ಠ ಫುಟ್ಬಾಲ್ ಆಟಗಾರ.

“ಮರಡೋನ” ಮೆಸ್ಸಿಯನ್ನು ತನ್ನ “ಉತ್ತರಾಧಿಕಾರಿ” ಎಂದು ಸ್ವತಃ ಘೋಷಿಸಿದ್ದಾನೆ, “ಚಿಕ್ಕ ಎತ್ತರ, ದೊಡ್ಡ ಸಾಧನೆ” ಎಂಬ ಗಾದೆಗೆ ಉದಾಹರಣೆ ಎಂದರೆ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ. 5 ಅಡಿ 7 ಇಂಚಿನ ಈ ಚಿಕ್ಕ ಮೂರ್ತಿ, ಇಂದು ಫುಟ್ಬಾಲ್ ಜಗತ್ತಿನ ಅತಿ ದೊಡ್ಡ ಹೆಸರಾಗಿದ್ದಾನೆ. ಅವನು ಕೇವಲ ಆಟಗಾರನಲ್ಲ, ಫುಟ್ಬಾಲ್ ಎಂಬ ಕಲೆಗೆ ಹೊಸ ವ್ಯಾಖ್ಯಾನ ನೀಡಿದ ಕಲಾವಿದ.

ಮೆಸ್ಸಿ Growth Hormone ಕೊರತೆಯಿಂದ ಬಳಲಿದರು. ಚಿಕಿತ್ಸೆಗೆ ಹಣವಿಲ್ಲದೆ ಕನಸುಗಳು ಕರಗುವ ಹಂತಕ್ಕೆ ಬಂದವು. ಆದರೆ ಆ ಚಿಕ್ಕ ಹುಡುಗನ ಕಣ್ಣಿನಲ್ಲಿ ಇದ್ದ ಫುಟ್ಬಾಲ್ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಲಿಲ್ಲ. ಈಅ ಬಾರ್ಸಿಲೋನಾ ಅವನ ಪ್ರತಿಭೆಯನ್ನು ಗುರುತಿಸಿ, ಚಿಕಿತ್ಸೆಗೂ ಸಹಾಯ ಮಾಡಿತು. ಅಲ್ಲಿಂದ ಶುರುವಾದ ಪ್ರಯಾಣ, ಇಂದು ಇತಿಹಾಸವಾಯಿತು.

ಬಾರ್ಸಿಲೋನಾ ಪರ 672 ಗೋಲ್, 4 ಬಾರಿ Champions League, 10 ಬಾರಿ La Liga – ಎಲ್ಲವನ್ನೂ ಗೆದ್ದರು. ಆದರೆ ಮೆಸ್ಸಿಯ ಅಸಲಿ ಪರೀಕ್ಷೆ ಅರ್ಜೆಂಟೀನಾ ಜರ್ಸಿಯಲ್ಲಿ ಇತ್ತು. 2014, 2016 ರಲ್ಲಿ ಫೈನಲ್‌ನಲ್ಲಿ ಸೋತು ಕಣ್ಣೀರಿಟ್ಟರು. “ಅವನಿಂದ ದೇಶಕ್ಕೆ ಟ್ರೋಫಿ ತರಲು ಆಗುವುದಿಲ್ಲ” ಎಂಬ ಮಾತುಗಳು ಕೇಳಿ ಬಂದವು. ಆದರೆ ಮೆಸ್ಸಿ ಸೋಲಿಗೆ ತಲೆಬಾಗಲಿಲ್ಲ. 2021 ರಲ್ಲಿ ಅoಠಿಚಿ ಂmeಡಿiಛಿಚಿ ಗೆದ್ದು ಬರವನ್ನು ಮುರಿದರು. 2022 ರ ಕತಾರ್ ವಿಶ್ವಕಪ್‌ನಲ್ಲಿ ಇಡೀ ಜಗತ್ತಿಗೆ ತನ್ನ ಶ್ರೇಷ್ಠತೆಯನ್ನು ತೋರಿಸಿದರು. ಫೈನಲ್‌ನಲ್ಲಿ 2 ಗೋಲ್, ಟೂರ್ನಿಯ ಅತ್ಯುತ್ತಮ ಆಟಗಾರನ ಪ್ರಶಸ್ತಿ, ಮತ್ತು 36 ವರ್ಷಗಳ ಬಳಿಕ ಅರ್ಜೆಂಟೀನಾಗೆ ವಿಶ್ವಕಪ್. ಆ ದಿನ ಮೆಸ್ಸಿ ಕೇವಲ ಟ್ರೋಫಿ ಎತ್ತಲಿಲ್ಲ, ಒಂದು ಪೀಳಿಗೆಯ ಕನಸನ್ನು ಎತ್ತಿದರು.

ಈ ಬಾರಿಯ ಫಿಫಾ ವಿಶ್ವಕಪ್’ನಲ್ಲಿ 8 ಗೋಲುಗಳು.. ಆ ಎಂಟು ಗೋಲುಗಳಿಗಿಂತಲೂ ಅದ್ಭುತ ಎನಿಸಿದ್ದು ಇಂಗ್ಲೆAಡ್ ವಿರುದ್ಧದ ಸೆಮಿಫೈನಲ್’ನಲ್ಲಿ ಮೆಸ್ಸಿಯ ಗೋಲು ರಹಿತ ಆಟ..

ಮೆಸ್ಸಿಯ ಸುತ್ತ ಚಕ್ರವ್ಯೂಹವನ್ನೇ ನಿರ್ಮಿಸಿ 85 ನಿಮಿಷಗಳ ಕಾಲ ಅವನನ್ನು ಕಟ್ಟಿ ಹಾಕಬಹುದು. ಆದರೆ ಪಂದ್ಯ ಗೆಲ್ಲಿಸಲು ಅವನಿಗೆ 5 ಸೆಕೆಂಡ್’ಗಳು ಸಾಕು. ಮೆಸ್ಸಿ ವಿರುದ್ಧ ಇಂಗ್ಲೆAಡ್ ಹೆಣೆದ ರಣವ್ಯೂಹ ಹೇಗಿತ್ತು ಎಂದರೆ, ಅವನ ಸುತ್ತ ನಾಲ್ಕು ಆಟಗಾರರ ಚಕ್ರವ್ಯೂಹವೇ ಎದ್ದು ನಿಂತಿತ್ತು.. ಅವರು ಪಂದ್ಯದುದ್ದಕ್ಕೂ ಮೆಸ್ಸಿಗೆ ಗೋಲು ಗಳಿಸಲು ಬಿಡಲಿಲ್ಲ. ಆದರೆ ಮೆಸ್ಸಿ ಕಾರಣದಿಂದ ಮತ್ತೊಬ್ಬರು ಗೋಲು ಗಳಿಸಿ ಅರ್ಜೆಂಟೀನಾ ಗೆಲ್ಲುವುದನ್ನು ತಡೆಯಲಾಗಲಿಲ್ಲ.

ಶ್ರೇಷ್ಠರು ಹೀಗೆಯೇ ಆಡುತ್ತಾರೆ. ಒಂದು ದಾರಿ ಮುಚ್ಚಿದಾಗ ಮತ್ತೊಂದು ದಾರಿಯನ್ನು ಹುಡುಕುತ್ತಾರೆ. ಫುಟ್ಬಾಲ್ ಜಗತ್ತು ಮೆಸ್ಸಿಯ ವೇಗ ಮತ್ತು ಸಾಮರ್ಥ್ಯದ ಬಗ್ಗೆ ಮಾತನಾಡುತ್ತದೆ. ಆದರೆ ಅವನ ನಿಜವಾದ ಸಾಮರ್ಥ್ಯ ಆತನ ಮೆದುಳು. ಮೈದಾನದಲ್ಲಿರುವ ಅಷ್ಟೂ ಆಟಗಾರರಿಗಿಂತ ಹತ್ತು ಪಟ್ಟು ವೇಗದಲ್ಲಿ ಆ ಮೆದುಳು ಕೆಲಸ ಮಾಡುತ್ತದೆ.. ಪ್ಲಾನ್ ‘ಎ’ ಕೆಲಸ ಮಾಡದೇ ಇದ್ದರೆ ಪ್ಲಾನ್ ‘ಬಿ’ ಸಿದ್ಧವಿರುತ್ತದೆ.

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್’ನಲ್ಲಿ ಕೆಲಸ ಮಾಡಿದ್ದು ಮೆಸ್ಸಿಯ ಪ್ಲಾನ್ ‘ಬಿ’ ತಂತ್ರಗಾರಿಕೆ. ಮೆಸ್ಸಿಯ ಆಟವನ್ನು ಪದಗಳಲ್ಲಿ ಹೇಳುವುದು ಕಷ್ಟ. ಚೆಂಡು ಅವನ ಕಾಲಿಗೆ ಅಂಟಿದ ಹಾಗೆ ಚಲಿಸುತ್ತದೆ. 3-4 ಆಟಗಾರರ ಮಧ್ಯದಿಂದ ಚಾಣಾಕ್ಷತೆಯಿಂದ ದಾರಿ ಮಾಡಿಕೊಂಡು ಹೋಗುತ್ತಾರೆ. ಅವನ ಎಡಗಾಲಿನಿಂದ ಹೊರಟ ಚೆಂಡು ಗೋಲ್‌ನೊಳಗೆ ಹೋಗುವಾಗ ಅದು ಗೋಲ್ ಅಲ್ಲ, ಅದು ಕವಿತೆ. ಮೆಸ್ಸೀ ಎಂದರೆ ಕೇವಲ ಗೋಲಲ್ಲ ಅವನು ಸೋತು ಬಿದ್ದು ಮತ್ತೆ ಹೇಳುವ ಛಲ, 800 ಕ್ಕೂ ಹೆಚ್ಚು ಅಧಿಕೃತ ಗೋಲ್, 8 ಬಾರಿ Ballon d’Or – ಈ ಸಂಖ್ಯೆಗಳು ಅವನ ಪ್ರತಿಭೆಗೆ ಸಾಕ್ಷಿ.

ಆದರೆ ಮೆಸ್ಸಿಯನ್ನು ಮೆಸ್ಸಿ ಆಗಿಸಿದ್ದು ಕೇವಲ ಗೋಲ್ ಅಲ್ಲ. ಮೈದಾನದಲ್ಲಿ ಅವರು ತುಂಬಾ ಶಾಂತ. ಪ್ರಚಾರ, ಗಲಾಟೆ, ಹಮ್ಮ ಅಹಂಕಾರ ಇಲ್ಲದ ಸರಳ ವ್ಯಕ್ತಿತ್ವ. ಎಲ್ಲವನ್ನೂ ಗೆದ್ದ ಮೇಲೂ ನೆಲದ ಮೇಲೆ ಕಾಲಿಟ್ಟು ಬದುಕುವ ವಿನಮ್ರತೆ. ತಂಡಕ್ಕಾಗಿ ಆಡುವ ಗುಣ. ಯುವ ಆಟಗಾರರನ್ನು ಬೆಂಬಲಿಸಿ ಬೆಳೆಸುವ ಮನಸ್ಸು. ಅದೇ ಅವರನ್ನು ಜಗತ್ತಿನ ಕೋಟಿ ಜನರ ಹೃದಯದ ರಾಜನನ್ನಾಗಿ ಮಾಡಿದೆ. ಮಿಸ್ಸಿ ಒಬ್ಬ ಸಾಮಾನ್ಯ ಆಟಗಾರನಲ್ಲ ಅವನು ಒಂದು ಭಾವನೆಯ ರೂಪ ಮತ್ತು ಕೀರ್ತಿಯಲ್ಲಿ ಇಡೀ ಜಗತ್ತನ್ನೇ ಗೆದ್ದ ಸರಳ ವ್ಯಕ್ತಿತ್ವ,ಗೋಲು ಹೊಡೆದಾಗಲೆಲ್ಲಾ ಆಕಾಶ ನೋಡಿ ಕೈ ತೋರಿಸುವುದು ಅಜ್ಜಿಗಾಗಿ.. ಸೆಲಿಯಾ.. ಪುಟ್ಟ ಹುಡುಗನಾಗಿದ್ದಾಗ ಮೆಸ್ಸಿಯನ್ನು ಫುಟ್ಬಾಲ್ ಅಭ್ಯಾಸಕ್ಕೆ, ಮ್ಯಾಚ್’ಗಳಿಗೆ ಕರೆದೊಯ್ಯುತ್ತಿದ್ದವರು ಅವರೇ.

ಇಂದು ಮೆಸ್ಸಿ ಯಲ್ಲೇ ಆಟವಾಡುತ್ತಿದ್ದರು ಜಗತ್ತಿನ ಪ್ರತಿಯೊಂದು ಮನೆಯಲ್ಲೂ ಅವರ ಹೆಸರು , ಕೂಗು, ಚಪ್ಪಾಳೆಗಳು ಕೇಳಿಬರುತ್ತಿರುತ್ತವೆ. ಅವರು ಹೇಳುವ ಸಂದೇಶ ಒಂದೇ: “ನಿನ್ನ ಕನಸು ದೊಡ್ಡದಿದ್ದರೆ, ನಿನ್ನ ಎತ್ತರ ಎಂದಿಗೂ ಅಡ್ಡಿಯಾಗುವುದಿಲ್ಲ.”

ಅದಕ್ಕೆ ಜನರು ಅವನನ್ನು“GOAT – Greatest O ಅದಕ್ಕೆ ಜನರು ಅವನನ್ನು “GOAT – Greatest Of All Time” ಎಂದು ಕರೆಯುತ್ತಾರೆ.
ವಿಶ್ವವೇ ಕಾತುರದಿಂದ ನೋಡೋತಿದೆ ಅಂತಿಮ ಹಣಾಹಣಿಯಲ್ಲಿ ಮೆಸ್ಸಿಯ ನಾಯಕತ್ವದಲ್ಲಿ ಅರ್ಜೆಂಟೀನಾ ಮತ್ತೊಮ್ಮೆ ವಿಶ್ವಕಪ್ 2026 ಗೆಲ್ಲಲಿದೆಯೇ…? ಮೆಸ್ಸೀ ಯು ಜೀವನ ಮತ್ತು ಮತ್ತು ಸಾಧನೆಗಳು ಇವತ್ತಿನ ಯುವ ಪೀಳಿಗೆಯ ಆಟಗಾರರಿಗೆ ಸ್ಪೂರ್ತಿಯಾಗಲಿ.

ಹೆಚ್ ವಿ ಮಂಜುನಾಥ ಸ್ವಾಮಿ
9844882366