ನಂದಿಗೋಣ ಜೀರ್ಣೋದ್ಧಾರಕ್ಕೆ ಸೆ.6ರಂದು ‘ಪ್ರಶ್ನಾ ಚಿಂತನೆ’ ಕಾರ್ಯಕ್ರಮ

0
7

ಕಾಪು : ನಂದಿಗೋಣ ಮತ್ತು ಪರಿವಾರ ಶಕ್ತಿಗಳ ಸಾನಿಧ್ಯದ ಸಮಗ್ರ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ, ಸೆಪ್ಟೆಂಬರ್ 6, 2026 (ಭಾನುವಾರ) ರಂದು ಬೆಳಿಗ್ಗೆ 9.30 ಗಂಟೆಯಿಂದ “ಪ್ರಶ್ನಾ ಚಿಂತನೆ” ಕಾರ್ಯಕ್ರಮವನ್ನು ಆಯೋಜಿಸಲು ಜೀರ್ಣೋದ್ಧಾರ ಸಮಿತಿ ನಿರ್ಧರಿಸಿದೆ.

ಜುಲೈ 9ರಂದು ನಡೆದ ಸಭೆಯಲ್ಲಿ ನೀಡಲಾದ ನಿರ್ದೇಶನ ಹಾಗೂ ಹತ್ತು ಸಮಸ್ತರ ಅಭಿಪ್ರಾಯದಂತೆ ಈ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ.

ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು, ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತನು, ಮನ ಮತ್ತು ಧನದ ಸಹಕಾರದೊಂದಿಗೆ ಮುಂಬರುವ ಜೀರ್ಣೋದ್ಧಾರ ಹಾಗೂ ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿ ನೆರವೇರಿಸಲು ಸಹಕರಿಸುವಂತೆ ವಿನಮ್ರವಾಗಿ ಮನವಿ ಮಾಡಿದ್ದಾರೆ.