ರೋಟರಿ ಕ್ಲಬ್ ಮಣಿಪಾಲ ಹಿಲ್ಸ್ ನ 2026-27 ರ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0
18

ರೋಟರಿ ಕ್ಲಬ್ ಮಣಿಪಾಲ ಹಿಲ್ಸ್ ನ 2026-27 ರ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ತಾ.13-07-2026ರಂದು ಮಣಿಪಾಲ ಜೂನಿಯರ್ ಕಾಲೇಜಿನ ರಮೇಶ್ ಪೈ ಸಭಾಂಗಣದಲ್ಲಿ ಜರಗಿತು.

ರೋ. ಬಸ್ರುರು ಕೇಶವ ನಾಯಕ್ 2026-27 ನೇ ಸಾಲಿನ ಅಧ್ಯಕ್ಷರಾಗಿ ಹಾಗೂ ರೋ. ಸುಂದರ ಶೆಟ್ಟಿ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ರೋ. PDG Major donor ಬಿ. ರಾಜರಾಮ ಭಟ್ ಅವರು ಪದಗ್ರಹಣಾಧಿಕಾರಿ ಯಾಗಿ ಅಧಿಕಾರ ಹಸ್ತಾಂತರ ಸುಗಮವಾಗಿ ನರವೇರಿಸಿದರು.

ಈ ಸಂದರ್ಭದಲ್ಲಿ ಕ್ಲಬ್ಬಿನ ಮುಖವಾಣಿ “ಮಣಿದರ್ಪಣ “ವನ್ನು ಬಿಡುಗಡೆಗೊಳಿಸಲಾಯಿತು. 2026ರ S. S. L. C ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಿ ಗೌರವಿಸಲಾಯಿತು.

ರೋಟರಿ ವಲಯ 4ರ ಸಹಾಯಕ ಗವರ್ನರ್ ರೋ. ಹೇಮಂತ್. ಯು. ಕಾಂತ್, ವಲಯ ಸೇನಾನಿ ರೋ. ಚೆಂಪಿ ರಮಾನಂದ ಭಟ್ ಹಾಗೂ ಇತರ ರೋಟರಿ ಗಣ್ಯರು ಉಪಸ್ಥಿತರಿದ್ದರು.