ಅನಾರೋಗ್ಯ ಪೀಡಿತ ಪೂರ್ಣೇಶ್‌ಗೆ ಹೆಲ್ಪ್ ಲೈನ್ ಸೇವಾ ತಂಡದಿಂದ ಧನಸಹಾಯ

0
20

ಚಿಕ್ಕಮಗಳೂರು : ಹೆಲ್ಪ್ ಲೈನ್ ಸೇವಾ ತಂಡ, ಮಂಗಳೂರು ಹಾಂದಿ ಶಾಖೆ – ಚಿಕ್ಕಮಗಳೂರು ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಪೂರ್ಣೇಶ್ (ಕಠಾರದಹಳ್ಳಿ) ಅವರ ಮನೆಗೆ ಭೇಟಿ ನೀಡಿ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಆರ್ಥಿಕ ನೆರವು ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಜುಲೈ 16ರಂದು ನಡೆದ ಈ ಸೇವಾ ಕಾರ್ಯದಲ್ಲಿ, ಚಿಕ್ಕ ಶಸ್ತ್ರಚಿಕಿತ್ಸೆಗೆ ತುರ್ತು ನೆರವಿನ ಅಗತ್ಯವಿದ್ದ ಪೂರ್ಣೇಶ್ ಅವರಿಗೆ ದಾನಿಗಳಾದ ಮಂಜುನಾಥ್ ಎನ್. (ರಾಣಿಗುಡ್ಡ, ಸತ್ತಿಹಳ್ಳಿ, ಕೆಪಿಟಿಸಿಎಲ್, ಆಲ್ದೂರು) ಅವರ ಸಹಕಾರದೊಂದಿಗೆ ಧನಸಹಾಯವನ್ನು ಹೆಲ್ಪ್ ಲೈನ್ ಸೇವಾ ತಂಡದ ಮೂಲಕ ಹಸ್ತಾಂತರಿಸಲಾಯಿತು. ಇದೇ ವೇಳೆ ದಿನಸಿ ಪದಾರ್ಥಗಳನ್ನೂ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹೆಲ್ಪ್ ಲೈನ್ ಸೇವಾ ತಂಡದ ಸದಸ್ಯರಾದ ಸುರೇಶ್ ಬಿ. (ಕೃಷ್ಣಪ್ಪ ಬಡಾವಣೆ), ಆನಂದ್ (ಗಾಳಿಗಂಡಿ), ನಾಗೇಶ್ (ಡ್ರೈವರ್, ಇಂದ್ರವಳ್ಳಿ ಎಸ್ಟೇಟ್), ಸುರೇಶ್ (ಟೈಲರ್, ಹಾಂದಿ), ರಾಜೇಶ್ (ಆಲ್ದೂರು), ಸೌಮ್ಯ, ಮಂಜುನಾಥ್, ಉಮೇಶ್ (ಚೆಂಡುಗೋಡು) ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು.

ಈ ಸೇವಾ ಕಾರ್ಯಕ್ಕೆ ಸಹಕರಿಸಿದ ದಾನಿಗಳು ಹಾಗೂ ಹೆಲ್ಪ್ ಲೈನ್ ಸೇವಾ ತಂಡದ ಸದಸ್ಯರ ಸೇವಾ ಮನೋಭಾವವನ್ನು ಸ್ಥಳೀಯರು ಶ್ಲಾಘಿಸಿದ್ದು, ನೆರವು ನೀಡಿದ ಎಲ್ಲರಿಗೂ ತಂಡದ ವತಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ.