ಬೆಳ್ತಂಗಡಿ: ದಿನಾಂಕ 17.07.2026ರಂದು ಭಜನಾ ಪರಿಷತ್ತಿನ ಬೆಳ್ತಂಗಡಿ ವಲಯದ ಭಜನಾ ತಂಡಗಳ ಸಮಾಲೋಚನಾ ಸಭೆಯು ಗ್ರಾಮಭಿವೃದ್ಧಿ ಯೋಜನೆಯ ಬೆಳ್ತಂಗಡಿ ವಲಯ ಕಚೇರಿಯಲ್ಲಿ ನಡೆಯಿತು.
ಈ ಸಭೆಯಲ್ಲಿ ಭಜನಾ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಶ್ರೀಯುತ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು. ಭಜನಾ ಪರಿಷತ್ತಿನ ವಲಯ ಅಧ್ಯಕ್ಷರಾದ ಗಣೇಶ್ ಕನ್ನಾಜೆ. ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ರಾಮ್ ಕುಮಾರ್ ವಲಯದ ಮೇಲ್ವಿಚಾರಕರಾದ ಜಿ ರವಿ ವಲಯದ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಮಾಲೋಚನ ಸಭೆಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಮುಂದಿನ ಸಭೆಗೆ ವಲಯದ ಎಲ್ಲಾ ಭಜನಾ ಮಂಡಳಿಗಳನ್ನು ಆಮಂತ್ರಿಸಿ ಭಜನಾ ಪರಿಷತ್ತಿನ ವಲಯದಲ್ಲಿ ಪೂರ್ಣ ಪ್ರಮಾಣದ ಸಭೆಯನ್ನು ನಡೆಸಿ ಆ ಸಭೆಯಲ್ಲಿ ಇಂದು ಚರ್ಚಿಸಿದ ವಿಷಯಗಳ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳುವಂತೆ ರಾಜ್ಯಾಧ್ಯಕ್ಷರು ಸಲಹೆಯನ್ನು ನೀಡಿದರು.
ಇಂದು ಚರ್ಚೆಗೆ ಬಂದ ಪ್ರಮುಖ ವಿಷಯಗಳು:-
*ವಲಯ ಸಮಿತಿಯನ್ನು ಬಲಪಡಿಸುವ ಬಗ್ಗೆ.
*ಪ್ರತಿ ಭಜನಾ ಮಂಡಳಿಗಳಿಗೆ ಪರಿಷತ್ತಿನ ಪದಾಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡುವ ಬಗ್ಗೆ.
*ಸೆಪ್ಟೆಂಬರ್ ತಿಂಗಳಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುವ ಭಜನಾ ಕಮ್ಮಟದಲ್ಲಿ ಪ್ರತಿ ಭಜನಾ ಮಂಡಳಿಗಳಿಂದ ತಲ 2 ಜನರನ್ನು ಆಯ್ಕೆ ಮಾಡುವಂತೆ ಚರ್ಚಿಸಲಾಯಿತು.
- ವಲಯದಲ್ಲಿ ಭಜನಾ ಮಂಡಳಿಗಳು ನಿಷ್ತ್ರೀಯಗೊಂಡಿದ್ದಲ್ಲಿ ಅದನ್ನು ಸಮಿತಿಯ ಗಮನಕ್ಕೆ ತಂದು ಸರಿಪಡಿಸುವ ಬಗ್ಗೆ ಚರ್ಚಿಸಲಾಯಿತು.
*ಕುಣಿತ ಭಜನೆ ಮಾಡುವಂತ ಕಾರ್ಯಕ್ರಮಗಳಲ್ಲಿ ಕುಳಿತು ಭಜನೆ ಮಾಡುವ ತಂಡಗಳಿಗೆ ಆದ್ಯತೆಯನ್ನು ನೀಡುವಂತೆ ಚರ್ಚಿಸಲಾಯಿತು.
*ಭಜನೆ ಮಾತ್ರವಲ್ಲದೆ
ಸ್ವಚ್ಛತಾ ಕಾರ್ಯಕ್ರಮ, ಆರೋಗ್ಯ ಮಾಹಿತಿ, ಶ್ರಮದಾನದಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವ ಬಗ್ಗೆ ಚರ್ಚಿಸಲಾಯಿತು.
*ಭಜನಾ ಮಂಡಳಿಗಳ ಅಧ್ಯಕ್ಷ ಕಾರ್ಯದರ್ಶಿಗಳ ಜೊತೆ ನಿಕಟ ಸಂಪರ್ಕವನ್ನು ಇಟ್ಟುಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರು ಸ್ವಾಗತಿಸಿ
ಬೆಳ್ತಂಗಡಿ ಏ ವಿಭಾಗದ ಸೇವಾ ಪ್ರತಿನಿಧಿ ಕೇಶವ ಇವರು ಧನ್ಯವಾದ ನೀಡಿದರು

