ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಫಿಜಿಯೋಥೆರಪಿ ಕಿಟ್‌ಗೆ ಚಾಲನೆ; ಬ್ರೈನ್ ಹೆಲ್ತ್ ಕ್ಲಿನಿಕ್‌ಗೆ ಉಜ್ಜೀವನ್ ಬ್ಯಾಂಕ್ ಕೊಡುಗೆ

0
11

ಉಡುಪಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ, ಜಿಲ್ಲಾ ಆಸ್ಪತ್ರೆ ಉಡುಪಿ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (ಕಭೀ), ಉಜ್ಜೀವನ್ ಸ್ಮಾಲ್ ಫೈನಾನ್ನ ಬ್ಯಾಂಕ್ ಇವರ ಸಂಯುಕ್ತ ಆಶ್ರಯದಲ್ಲಿ ಫಿಜಿಯೋಥೆರಪಿ ಕಿಟ್‌ ನ ಉದ್ಘಾಟನೆ ಹಾಗೂ ಅನುಷ್ಠಾನ ಕಾರ್ಯಕ್ರಮವನ್ನು ಜಿಲ್ಲಾ ಆಸ್ಪತ್ರೆಯ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ನ ಫಿಸಿಯೋಥೆರಪಿ ವಿಭಾಗದಲ್ಲಿ ಶನಿವಾರ ಜುಲೈ 18 ರಂದು ಹಮ್ಮಿಕೊಳ್ಳಲಾಯಿತು.
ಉಡುಪಿ ಜಿಲ್ಲಾ ಆಸ್ಪತ್ರೆಯ ಬ್ರೈನ್‌ ಹೆಲ್ತ್ ಕಿನ್ಸಿಕ್‌ನಲ್ಲಿ ಉಜ್ಜೀವನ್ ಸ್ಮಾಲ್ ಬ್ಯಾಂಕ್ ಫೈನಾನ್ನ ಇವರು ನೀಡಿರುವ ಉಪಕರಣಗಳ ಉದ್ಘಾಟನೆಯನ್ನು ಢಾ. ಆವನಿ ಶೆಟ್ಟಿ ವೈದ್ಯಾಧಿಕಾರಿಗಳು ಕಭೀ ಇವರಿಂದ ನೆರವೇರಿಸಿದ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕ್ಷಿಕರಾದ ಡಾ. ಹೆಚ್. ಅಶೋಕ್‌ ರವರು ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ್ದು ವೈದ್ಯಾಧಿಕಾರಿಯವರ ಕಾರ್ಯದಕ್ಷತೆಯ ಬಗ್ಗೆ ಮಾತನಾಡಿ, ಕಭೀ ಕಾರ್ಯಕ್ರಮದಡಿಯಲ್ಲಿ ರೋಗಿಗಳಿಗೆ “ಫಿಜಿಯೋಥೆರಪಿ” ಚಿಕ್ಸಿತೆ ಬಹಳ ಮುಖ್ಯವಾಗಿದೆ ಹಾಗೂ ಈ ಕೆಲಸವು ನಮ್ಮ ಬ್ರೈನ್‌ ಹೆಲ್ತ್ ಕಿನ್ಸಿಕ್‌ನಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯುತ್ತಿದ್ದು, ಜನಸಾಮ್ಯಾನರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಹಾಗೂ ಉಜ್ಜೀವನ್ ಸ್ಮಾಲ್ ಬ್ಯಾಂಕ್ ನ ಕಿಟ್‌ ಇನ್ನಷ್ಟು ಜನರಿಗೆ ಸಹಾಯವಾಗಲಿದೆ ಎಂದು ಹೇಳಿದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳು ಹಾಗೂ ಕಭೀ ಕಾರ್ಯಕ್ರಮದ ನೂಡಲ್ ಅಧಿಕಾರಿಗಳಾದ ಡಾ. ಲತಾ ನಾಯಕ್ ಅವರು ಮಾತನಾಡಿ, ಕಭೀ ಕಾರ್ಯಕ್ರಮದಲ್ಲಿ ನರವೈಜ್ಞಾನಿಕ ಖಾಯಿಲೆಗಳಾದ ತಲೆನೋವು. ಪಾರ್ಶ್ವವಾಯು, ಅಪಸ್ಮಾರ ಹಾಗೂ ಡಿಮೆಂಶಿಯ ಅಂತಹ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಹಾಗೂ ನರವೈಜ್ಞಾನಿಕ ಖಾಯಿಲೆ ಇರುವಂತಹ ವ್ಯಕ್ತಿಗೆ ಬೆಂಗಳೂರಿನ ನಿಮ್ಹಾನ್ಸ್ ಇಂದ ಟೆಲಿ ನ್ಯೂರೋಲಾಜಿ ಎಂಬ ಸೇವೆಯನ್ನು ನೀಡಲಾಗುತ್ತದೆ. ಹೀಗೆ ಕಭೀ ಉತ್ತಮವಾದ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದರ ಜೊತೆಗೆ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಬಗ್ಗೆ ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಜ್ಜೀವನ್ ಸ್ಕಾಲ್ ಫೈನಾನ್ಸ್ ಬ್ಯಾಂಕ್ ಉಡುಪಿ ಪ್ರದೇಶ ವ್ಯವಸ್ಥಾಪಕರಾದ ಶ್ರೀ ಮುರಳಿ ರೈ ರವರು ರಿಬ್ಬನ್‌ ಕಟ್ಟಿಂಗ್‌ ಮುಖಾಂತರ ಕಿಟ್‌ ಉದ್ಘಾಟನೆ ಮಾಡಿ ಕಿಟ್‌ ನ್ನು ಹಸ್ತಾಂತರಿಸಿದರು, ಬ್ಯಾಂಕ್‌ ಹಾಗೂ ಉದ್ಘಾಟನಾ ಕಾರ್ಯಕ್ರಮದ ವಿವಿಧತೆಯ ಬಗ್ಗೆ ಮಾತನಾಡಿದರು. ಶಾಖಾ ವ್ಯವಸ್ಥಾಪಕರಾದ ಶ್ರೀ ಗಣೇಶ್‌ ರಾವ್‌ ವೇದಿಕೆಯಲ್ಲಿ ಉಪಸ್ಥತರಿದ್ದರು ಹಾಗೂ ಅವರ ತಂಡದವರು ಆಗಮಿಸಿದ್ದರು. ಹಾಗೇ ಪ್ರಶಂಸಾ ಪತ್ರವನ್ನು ಮಾನ್ಯ ಶಸ್ತ್ರಚಿಕಿತ್ಸಕರು ಉಜ್ಜೀವನ್ ಸ್ಕಾಲ್ ಫೈನಾನ್ಸ್ ಬ್ಯಾಂಕ್ ಉಡುಪಿ ರವರಿಗೆ ವಿತರಿಸಿದರು.
ಕಿಟ್‌ ನ ಅನುಷ್ಠಾನದ ಅಂಗವಾಗಿ ಥೆರಾ ಬ್ಯಾಂಡ್‌ ಹಾಗೂ ವೈಟ್‌ ಕಫ್‌ ನ ಬಳಸಿಕೊಂಡು ಸ್ಟ್ರೋಕ್‌ ಆಗಿ ನಮ್ಮಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಸಾಂಕೇತಿಕವಾಗಿ ಬಳಲಾಯಿತು ಹಾಗೂ ಅವರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಭೀ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಶ್ರೀಮತಿ ಅರ್ಪಿತಾ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.