ಬೈಕ್ ಅಪಘಾತದಲ್ಲಿ ಗಂಭೀರ ಗಾಯ: ದಿನಗೂಲಿ ಕಾರ್ಮಿಕ ಜಗದೀಶ್ ಆಚಾರ್ಯ ಚಿಕಿತ್ಸೆಗೆ ನೆರವಿನ ಕೋರಿಕೆ

0
72

ಉಡುಪಿ: ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ದಿನಗೂಲಿ ಕಾರ್ಮಿಕ ಜಗದೀಶ್ ಆಚಾರ್ಯ ಅವರು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸೆಗೆ ಸಾರ್ವಜನಿಕರಿಂದ ಆರ್ಥಿಕ ನೆರವು ಕೋರಲಾಗಿದೆ.

ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟಾಗಿರುವ ಜಗದೀಶ್ ಆಚಾರ್ಯ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಸುಮಾರು ₹3.5 ಲಕ್ಷದಿಂದ ₹4 ಲಕ್ಷದವರೆಗೆ ವೆಚ್ಚವಾಗುವ ಸಾಧ್ಯತೆಯಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ದಿನಗೂಲಿ ಕೆಲಸ ಮಾಡಿ ಕುಟುಂಬವನ್ನು ನಿರ್ವಹಿಸುತ್ತಿದ್ದ ಜಗದೀಶ್ ಆಚಾರ್ಯ ಅವರು ಇಬ್ಬರು ಮಕ್ಕಳ ಹಾಗೂ ವೃದ್ಧ ಪೋಷಕರ ಜವಾಬ್ದಾರಿಯನ್ನು ಹೊತ್ತಿದ್ದು, ಇಷ್ಟೊಂದು ದೊಡ್ಡ ಚಿಕಿತ್ಸಾ ವೆಚ್ಚವನ್ನು ಭರಿಸುವುದು ಕುಟುಂಬಕ್ಕೆ ಅಸಾಧ್ಯವಾಗಿದೆ.

ಆದ್ದರಿಂದ ಮಾನವೀಯ ನೆಲೆಯಲ್ಲಿ ದಾನಿಗಳು ಹಾಗೂ ಸಾರ್ವಜನಿಕರು ತಮ್ಮಿಂದ ಸಾಧ್ಯವಾದ ಆರ್ಥಿಕ ನೆರವನ್ನು ನೀಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ. ಅಲ್ಲದೆ ಈ ಮಾಹಿತಿಯನ್ನು ಹೆಚ್ಚಿನ ಜನರಿಗೆ ತಲುಪಿಸುವ ಮೂಲಕ ಸಹಾಯಹಸ್ತ ಚಾಚುವಂತೆ ಕೋರಿದ್ದಾರೆ.

ಸಹಾಯಕ್ಕಾಗಿ ಸಂಪರ್ಕಿಸಿ: 7349051673

UPI ID: swathiswathi97245@okicibank
ಹೆಸರು: Swathi

“ನಿಮ್ಮ ಸಣ್ಣ ನೆರವು ಒಂದು ಕುಟುಂಬದ ಬದುಕಿಗೆ ದೊಡ್ಡ ಆಸರೆಯಾಗಬಹುದು” ಎಂದು ಕುಟುಂಬದವರು ಮನವಿ ಮಾಡಿದ್ದಾರೆ.

ವರದಿ: ವಿನೋದ್ ಶೆಟ್ಟಿ, ಉಡುಪಿ.