ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇತಾಜಿ ನಗರದಲ್ಲಿರುವ ಎಂಆರ್ಎಫ್ ಮತ್ತು ಎಫ್ ಎಸ್ ಎಂ ಘಟಕಗಳಿಗೆ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಾದ ಪೌಜಿಯಾ ತರನ್ನುಮ್ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತಿ ಸಿಇಒ ಪ್ರತೀಕ್ ಬಾಯಲ್, ಸಿಪಿಒ ಡಾಕ್ಟರ್ ಉದಯ್ ಕುಮಾರ್ ಶೆಟ್ಟಿ, ಎಕ್ಸಿಕ್ಯೂಟ್ ಇಂಜಿನಿಯರ್ ಉದಯ ಕುಮಾರ್, ತಾಲೂಕು ಪಂಚಾಯತ್ ಇಒ ವಿಜಯಾ, ಪಿಡಿಒ ವಿರೂಪಾಕ್ಷಯ್ಯ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.

