ಕಾಶಿಪಟ್ಣ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಗೆ ನೂತನ ಅಧ್ಯಕ್ಷರಾಗಿ ಹರೀಶ್ ಕೆ. ಸಾಲ್ಯಾನ್ ಆಯ್ಕೆ

0
9

ಮೂಡುಬಿದಿರೆ : ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ, ಕಾಶಿಪಟ್ಣ ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಕಾಶಿಪಟ್ಣದ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು.

ಸಮಿತಿಯ ನಿರ್ಗಮಿತ ಅಧ್ಯಕ್ಷ ಶೈಲೇಶ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2026-27ನೇ ಸಾಲಿನ ನೂತನ ಆಡಳಿತ ಮಂಡಳಿಯನ್ನು ಸರ್ವ ಸದಸ್ಯರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಕೆ. ಸಾಲ್ಯಾನ್ (ಕಾಶಿಪಟ್ಣ) ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ಶೈಲೇಶ್ ಕೋಟ್ಯಾನ್ (ಮೇಗಿನ ಬರೆಂಜ) ಹಾಗೂ ಸ್ಥಾಪಕಾಧ್ಯಕ್ಷರಾಗಿ ನಾಗೇಶ್ ಕೆ. ಸಾಲ್ಯಾನ್ (ಮೂಲ್ದೊಟ್ಟು) ಆಯ್ಕೆಯಾದರು.

ಕಾರ್ಯದರ್ಶಿಯಾಗಿ ಪ್ರಸಾದ್ ಡಿ. ಖಂಡಿಗ (ಹೊಸಮನೆ), ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ನಾಯ್ಕ (ಪರಪ್ಪಾದೆ), ಉಪಾಧ್ಯಕ್ಷರಾಗಿ ಶಿವಪ್ರಸಾದ್ (ಮೆರ್ಕಾಲು) ಹಾಗೂ ಪ್ರದೀಪ್ (ಕಂಬ್ಳದಡ್ಡ), ಕೋಶಾಧಿಕಾರಿಯಾಗಿ ಪ್ರಸಾದ್ ಕೋಟ್ಯಾನ್ (ಕುಜಂಬೆ) ಆಯ್ಕೆಯಾದರು.

ಇದೇ ವೇಳೆ ವಿವಿಧ ಉಪಸಮಿತಿಗಳ ಸಂಚಾಲಕರನ್ನೂ ಆಯ್ಕೆ ಮಾಡಲಾಯಿತು. ಪೂಜಾ ಸಮಿತಿ – ಮೋಹನ್ ಶೆಟ್ಟಿ (ಪರಪ್ಪು), ಸ್ವಾಗತ ಸಮಿತಿ – ಯುವರಾಜ್ ಶೆಟ್ಟಿಗಾರ್ (ಪಣಿಲಾಜೆ), ಕ್ರೀಡಾ ಸಮಿತಿ – ನಿತೇಶ್ ಕೋಟ್ಯಾನ್ (ಮೇಗಿನ ಬರೆಂಜ), ಅನ್ನಸಂತರ್ಪಣಾ ಸಮಿತಿ – ರಾಜೇಂದ್ರ (ಮರಮ್ಮದೊಟ್ಟು), ಶೋಭಾಯಾತ್ರೆ ಸಮಿತಿ – ಪ್ರವೀಣ್ ಶೆಟ್ಟಿ (ಮಜಲು), ಪ್ರಚಾರ ಸಮಿತಿ – ಹರೀಶ್ ಪಿ. ಕೋಟ್ಯಾನ್ (ಪಣಿಲಾಜೆ) ಹಾಗೂ ಸ್ವಚ್ಛತಾ ಸಮಿತಿ – ಮುಖೇಶ್ (ಜಾರಿಗೆದಡಿ) ಅವರನ್ನು ಸಂಚಾಲಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸಮಿತಿಯ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದು, ಮುಂಬರುವ ಶ್ರೀ ಶಾರದಾ ಮಹೋತ್ಸವವನ್ನು ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಆಚರಿಸಲು ಎಲ್ಲರೂ ಸಹಕಾರ ನೀಡುವಂತೆ ಕರೆ ನೀಡಲಾಯಿತು.