ಕಾಸರಗೋಡು: ದಿ.ಲಕ್ಷ್ಮೀ ಟೀಚರ್ ದಿ. ಕಣ್ಣಪ್ಪ ಮಾಸ್ಟರ್ ಮೆಮೋರಿಯಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಶ್ರೀ ಮಾತಾ ಕಲಾ ಮಂದಿರ ಕುಂಜತ್ತೂರು ಇದರ ವತಿಯಿಂದ ಭರತನಾಟ್ಯದ ವಸ್ತ್ರವಿನ್ಯಾಸ ಹಾಗೂ ಕೇಶವಿನ್ಯಾಸದ ಬಗ್ಗೆ ಉಚಿತ ಕಾರ್ಯಾಗಾರವನ್ನು ತಾ.19-07-2026 ರಂದು ಆಯೋಜಿಸಲಾಗಿತ್ತು .

ನಾಟ್ಯ ವಿದೂಷಿ ರಾಜಶ್ರೀ ಉಳ್ಳಾಲ್ ಇವರ ಪರಿಕಲ್ಪನೆಯಲ್ಲಿ, ಚಂಚಲಾಕ್ಷಿ ಮತ್ತು ಪ್ರೀಯಾ ಸೋಮೇಶ್ವರ ರವರ ಸಹಕಾರದೊಂದಿಗೆ ಸಂಪನ್ನಗೊಂಡ ಕಾರ್ಯಾಗಾರವನ್ನು ಟ್ರಸ್ಟ್ ಪದಾಧಿಕಾರಿಗಳಾದ ಭಾರತಿ ರವೀಂದ್ರನಾಥ್ ದೀಪ ಬೆಳಗಿಸಿ ಉದ್ಘಾಟಿಸಿದರು, ಜಯಶೀಲಾ ಟೀಚರ್ ಸ್ವಾಗತಿಸಿ, ಚಂದ್ರಿಕಾ ಪ್ರಾಸ್ತಾವಿಕ ಮಾತನಾಡಿದರು, ಕುಮಾರಿ ದಿವಿಶಾರವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ವಿದೂಷಿ ರಾಜಶ್ರೀ ಉಳ್ಳಾಲ್ ವಂದಿಸಿದರು, ರವಿ ಉಚ್ಚಿಲ್ ಸಹಕರಿಸಿದರು.ಹಲವು ನೃತ್ಯ ಕಲಾವಿದೆಯರ ಪೋಷಕರು ಕಾರ್ಯಾಗಾರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.

