ಬೆಳುವಾಯಿಯಲ್ಲಿ ಜುಲೈ 23ರಂದು ‘ಅಮ್ಮ ಎಲೆಕ್ಟ್ರಿಕಲ್ಸ್’ ಉದ್ಘಾಟನೆ: ವಿದ್ಯುತ್ ಉಪಕರಣಗಳ ಮಾರಾಟ, ಸೇವೆ

0
25

ಮೂಡುಬಿದಿರೆ: ಬೆಳುವಾಯಿಯ ಪೆಟ್ರೋಲ್ ಪಂಪ್ ಎದುರಿನ ಬಾಲಾಜಿ ಆರ್ಕೇಡ್‌ನಲ್ಲಿ ‘ಅಮ್ಮ ಎಲೆಕ್ಟ್ರಿಕಲ್ಸ್’ ನೂತನ ಸೇಲ್ಸ್ ಮತ್ತು ಸರ್ವಿಸ್ ಮಳಿಗೆಯು ಜುಲೈ 23ರಂದು ಬೆಳಿಗ್ಗೆ 9.30ಕ್ಕೆ ಉದ್ಘಾಟನೆಯಾಗಲಿದೆ. ವಿವಿಧ ಪ್ರಮುಖ ಕಂಪನಿಗಳ ಅಧಿಕೃತ ವಿತರಕರಾಗಿರುವ ಈ ಸಂಸ್ಥೆಯು ವಿದ್ಯುತ್ ಉಪಕರಣಗಳ ಮಾರಾಟ, ದುರಸ್ತಿ ಹಾಗೂ ತಾಂತ್ರಿಕ ಸೇವೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸಲಿದೆ ಎಂದು ಸಂಸ್ಥೆಯ ಮಾಲೀಕರಾದ ಅನಿಲ್ ಅಂಚನ್, ಸುನಿಲ್ ಅಂಚನ್ ತಿಳಿಸಿದ್ದಾರೆ.

ನೂತನ ಮಳಿಗೆಯಲ್ಲಿ ಕೆಎಂಪಿ ಇಂಡಸ್ಟ್ರೀಸ್, ಪ್ರೀಮಿಯರ್ ಪಂಪ್, ಆಸ್ಟ್ರಲ್ ಪೈಪ್ಸ್, ಸಿ.ಆರ್.ಐ. ಪಂಪ್ಸ್, ಗುಡ್‌ವಿಲ್ ಪಂಪ್ಸ್, ಕ್ರಾಮ್ಟನ್ ಗ್ರೀವ್ಸ್, ಸುದರ್ಶನ್ ಪೈಪ್ಸ್, ಲುಬಿ ಪಂಪ್ಸ್, ಟಾರೊ ಪಂಪ್ಸ್, ಪಾಲಿಕ್ಯಾಬ್, ಕಿರ್ಲೋಸ್ಕರ್, ಪೃಥ್ವಿ, ಟೆಕ್ಸ್ಮೊ ಹಾಗೂ ಬಜಾಜ್ ಎಲೆಕ್ಟ್ರಿಕಲ್ಸ್ ಕಂಪನಿಗಳ ಅಧಿಕೃತ ಉತ್ಪನ್ನಗಳು ಲಭ್ಯವಿರಲಿವೆ.

ಸಂಸ್ಥೆಯಲ್ಲಿ ಬೋರ್‌ವೆಲ್ ಪಂಪ್‌ಸೆಟ್, ಮೋನೋಬ್ಲಾಕ್ ಪಂಪ್‌ಸೆಟ್, ಓಪನ್‌ವೆಲ್ ಸಬ್‌ಮರ್ಸಿಬಲ್ ಪಂಪ್, ಕಾಲಮ್ ಪೈಪ್ ಹಾಗೂ ಕೇಬಲ್‌ಗಳ ಮಾರಾಟ ನಡೆಯಲಿದೆ. ಜೊತೆಗೆ ಫ್ಯಾನ್, ಮಿಕ್ಸಿ, ಗ್ರೈಂಡರ್, ಇಸ್ತ್ರಿಪೆಟ್ಟಿಗೆ ಸೇರಿದಂತೆ ವಿವಿಧ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ಮಾರಾಟ ಹಾಗೂ ದುರಸ್ತಿ ಸೇವೆಯೂ ಲಭ್ಯವಿದೆ.
ಇದರೊಂದಿಗೆ ಬೋರ್‌ವೆಲ್ ಡ್ರಿಲ್ಲಿಂಗ್ ಏಜೆಂಟ್ಸ್ ಸೇವೆ, ಬೋರ್‌ವೆಲ್ ಮೋಟಾರ್ ಲಿಫ್ಟಿಂಗ್, ಹೈಡ್ರೋಲಿಕ್ ಸಿಸ್ಟಮ್ ಹಾಗೂ ಬೋರ್‌ವೆಲ್‌ಗೆ ಪಂಪ್ ಅಳವಡಿಸುವ ತಾಂತ್ರಿಕ ಸೇವೆಗಳನ್ನೂ ಸಂಸ್ಥೆ ಒದಗಿಸಲಿದೆ. ಹೆಚ್ಚಿನ ಮಾಹಿತಿಗಾಗಿ 9164616309 ಅಥವಾ 8970538552 ಸಂಖ್ಯೆಯನ್ನು ಸಂಪರ್ಕಿಸಬಹುದು.