ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಹಿಳಾ ವಿಭಾಗದ ಆಷಾಢ ಹಬ್ಬ ಆಚರಣೆ

0
22


ಸಮಿತಿಯು ಸರ್ಕಾರದಲ್ಲಿ ನೋಂದಣಿಯಾಗಿರುವುದರಿಂದ ಸದಸ್ಯರ ಜವಾಬ್ದಾರಿ ಮತ್ತು ಕಾರ್ಯಚಟುವಟಿಕೆಗಳು ಮತ್ತಷ್ಟು ಹೆಚ್ಚಾಗಿವೆ

ಮುಂಬಯಿ: ಸಮಿತಿಯ ಸದಸ್ಯರು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಅತ್ಯಂತ ಉತ್ಸಾಹದಿಂದ ಒಗ್ಗಟ್ಟಿನಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಇದೀಗ ಸಮಿತಿಯು ಸರ್ಕಾರದಲ್ಲಿ ನೋಂದಣಿಯಾಗಿರುವುದರಿಂದ ಸದಸ್ಯರ ಜವಾಬ್ದಾರಿ ಮತ್ತು ಕಾರ್ಯಚಟುವಟಿಕೆಗಳು ಮತ್ತಷ್ಟು ಹೆಚ್ಚಾಗಿವೆ. ಸಮಿತಿಯ ಪ್ರತಿಯೊಬ್ಬ ಸದಸ್ಯರೂ ಹೆಚ್ಚಿನ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷ ನ್ಯಾ. ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು ತಿಳಿಸಿದರು.


: ಮಲಾಡ್ ಪೂರ್ವ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಆಷಾಢ ಹಬ್ಬದ ಕಾರ್ಯಕ್ರಮವು ಜುಲೈ 19ರಂದು ಮಲಾಡ್ ಪೂರ್ವದ ಉತ್ಕರ್ಷ ವಿದ್ಯಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅಕ್ಕಿ ಮುಡಿಯನ್ನು ಅನಾವರಣ ಗೊಳಿಸಿ ಉದ್ಘಾಟಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ನ್ಯಾ. ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು, ಮುಂದೆ ಸಮಿತಿಯ ವಾರ್ಷಿಕೋತ್ಸವ, ಮಕ್ಕಳ ಉತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸಲಾಗುತ್ತಿವೆ. ಈಗಾಗಲೇ ಸದಸ್ಯರು ತಮ್ಮ ಹೆಸರನ್ನು ನೋಂದಾಯಿಸಿರುವ ನಾಲ್ಕು ದಿನಗಳ ಧಾರ್ಮಿಕ ಯಾತ್ರೆಯು ಶೀಘ್ರದಲ್ಲೇ ನಡೆಯಲಿದ್ದು, ಈ ಯಾತ್ರೆಯನ್ನು ಯಶಸ್ವಿಗೊಳಿಸಲು ಎಲ್ಲಾ ಸದಸ್ಯರು ಪೂರ್ಣ ಸಹಕಾರ ನೀಡುವಂತೆ ಅವರು ಮನವಿ ಮಾಡಿ, , ಆಟಿ ತಿಂಗಳ ವಿಶೇಷತೆ, ನಮ್ಮ ಆಚರಣೆ, ಸಂಪ್ರದಾಯ, ಸಂಸ್ಕೃತಿ
ಭಾಷೆ ಮತ್ತು ತವರೂರಿನ ಸೊಗಡನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಿತಿ ಸೇವೆ ಮಾಡುತ್ತಿದ್ದೇವೆ, ವರ್ಷಪೂರ್ತಿ ಮಹಿಳೆಯರ ಲವ ಲವಕೆಯ ಕಾರ್ಯ ಚಟುವಟಿಕೆಗಳು ನಡೆಸುತ್ತಾ ಸಮಿತಿಯನ್ನು ಬಲಿಷ್ಠ ಗೊಳಿಸಿದ್ದಾರೆ,ಮಹಿಳೆಯರು ಮಾಡಿ ತಂದಿರುವ ಅಡುಗೆ ಊಟವಾಗಿರಲಿಲ್ಲ, ಅದರಲ್ಲಿ ಅವರು ಭಾವನಾತ್ಮಕ ಸಂಬಂಧವಿದೆ ಎಂದು ನುಡಿದರು,

ಸಮಿತಿಯ ಉಪಾಧ್ಯಕ್ಷರಾದ , ಭಾರತ್ ಬ್ಯಾಂಕಿನ ನಿರ್ದೇಶಕ ಸಂತೋಷ್ ಕೆ ಪೂಜಾರಿ ಮಾತನಾಡಿ ಜಾತಿಯನ್ನು ಮೀರಿ ಎಲ್ಲರೂ ಮಲಾಡ್ ಪರಿಸರದ ತುಳು ಕನ್ನಡಿಗರ ಒಂದೇ ಸೂರಿನಡಿ ಸಮಾಜದ ಸೇವೆ ಮಾಡುತ್ತಿದ್ದೇವೆ ಎಂದು ನುಡಿದರು. ಯುವ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪ್ರಣಿತಾ ವಿ. ಶೆಟ್ಟಿ ಮಾತನಾಡುತ್ತಾ ಈ ವರ್ಷ ಕೊನೆಯಲ್ಲಿ ಮಕ್ಕಳ ಉತ್ಸವ ನಡೆಯಲಿದೆ.ಅದು ದೊಡ್ಡ ಬಜೆಟಿನ ದಿನಪೂರ್ತಿ ಕಾರ್ಯಕ್ರಮವಾಗಿದೆ ಅದಕ್ಕೆ ತಾವೆಲ್ಲರೂ ಸಹಕಾರ ನೀಡಬೇಕು ಎಂದರು.

. ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆ ರತ್ನಾ ಡಿ. ಕುಲಾಲ್ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಶೀಲಾ ಎಂ ಪೂಜಾರಿ ಆಟಿ ಬಗ್ಗೆ ಮಾಹಿತಿಯಿತ್ತರು.

ಸಮಿತಿಯು ‘ಶ್ರೀ ವರಮಹಾಲಕ್ಷ್ಮಿ ಚಾರಿಟೇಬಲ್ ಫೌಂಡೇಶನ್ (ರಿ.)’ ಹೆಸರಿನಲ್ಲಿ ಸರ್ಕಾರದಲ್ಲಿ ನೋಂದಣಿಯಾಗಿದ್ದು, ಆದಾಯ ತೆರಿಗೆ ಕಾಯ್ದೆಯ 80G ಮಾನ್ಯತೆಗಳನ್ನು ಪಡೆದಿದೆ. ಇದರ ಮೂಲಕ ಸಮಿತಿಯ ಸಮಾಜಮುಖಿ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವಾ ಚಟುವಟಿಕೆಗಳಿಗೆ ಮತ್ತಷ್ಟು ಬಲ ದೊರೆತಿದ್ದು, ದಾನಿಗಳಿಗೂ ತೆರಿಗೆ ವಿನಾಯಿತಿ ಸೌಲಭ್ಯ ಲಭ್ಯವಾಗಲಿದೆ ಎಂದು ಸಮಿತಿಯ ಸಂಚಾಲಕ ದಿನೇಶ್ ಕುಲಾಲ್ ತಿಳಿಸಿದರು.

ಯುವ ವಿಭಾಗದ ಕಾರ್ಯಾಧ್ಯಕ್ಷ ಸುದೀಪ್ ಪೂಜಾರಿಯ ಮತ್ತು ನವೀನ್ ಸಾಲ್ಯಾನ್ ಇವರು ಆಟಿ ಕಳಿಂಜ ಪ್ರದರ್ಶನ ನಡೆಸಿದರು. ಪೂಜಾ ಸಮಿತಿಯ ಕಾರ್ಯದರ್ಶಿ ಸನತ್ ಪೂಜಾರಿ ಕೆಲ್ಲಪುತ್ತಿಗೆ
ಆಟಿ ಕಳಿಂಜದ ಬಗ್ಗೆ ಸೂಕ್ತ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕೋಶಾಧಿಕಾರಿ ಸುರೇಂದ್ರ ಆಚಾರ್ಯ, ಮಹಿಳಾ ವಿಭಾಗದ ಕಾರ್ಯದರ್ಶಿ ಶೀಲಾ ಎಂ ಪೂಜಾರಿ, ಉಪಕಾರ್ಯಾಧ್ಯಕ್ಷರುಗಳಾದ ಸಂಧ್ಯಾ ಎಸ್ ಪ್ರಭು, , ಜೊತೆ ಕಾರ್ಯದರ್ಶಿಗಳಾದ ಭಾರತಿ ಆಚಾರ್ಯ, ವಿದ್ಯಾ ಆಚಾರ್ಯ, ಜೊತೆ ಕೋಶಾಧಿಕಾರಿಗಳಾದ ವಿದ್ಯಾ ನಾಯಕ್ . ಶೋಭಾ ಲಕ್ಷ್ಮಣ್ ರಾವ್ ಗಾಣಿಗ,
ಸಲಹೆಗಾರರಾದ ಮೋಹಿನಿ ಜಗನ್ನಾಥ್ ಶೆಟ್ಟಿ, ಉಪಸ್ಥಿತರಿದ್ದರು.
ಉದ್ಘಾಟನೆ ಸಂದರ್ಭದಲ್ಲಿ ವರ್ಲಿ ಅಪ್ಪಾಜಿ ಬೀಡು ಕ್ಷೇತ್ರದ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಕವಿತಾ ಜಿ ಶೆಟ್ಟಿ, ಉಪಾಧ್ಯಕ್ಷೆ ದಿವ್ಯ ಪಿ ಶೆಟ್ಟಿ ಅವರು ಪಾಲು ಗೊಂಡಿದ್ದುರು,
ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಶೋಭಾ ಎಲ್ ರಾವ್ ಸಭಾ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಾನ್ ಭಾರತಿ ಸುರೇಂದ್ರ ಆಚಾರ್ಯ, ನಲಿನಿ ಕರ್ಕೇರ ನಿರೂಪಿಸಿದರು. ಶೃತಿ ಸನತ್ ಪೂಜಾರಿ ವಿಶೇಷ ಆವಾನಿತರನ್ನು ಆಹ್ವಾನಿಸಿದರು ,
. ಪುಷ್ಪಲತಾ ಸಾಲ್ಯಾನ್ ಮನೆಯಲ್ಲಿ ಆಟಿಯ ಅಡುಗೆ ತಯಾರಿಸಿ ತಂದ ಎಲ್ಲಾ ಮಹಿಳೆಯ ಹೆಸರನ್ನು ವಾಚಿಸಿದರು. ಶಾರದಾ ಪೂಜಾರಿ ಕೊನೇಗೆ ಧನ್ಯವಾದವಿತ್ತರು. .
ಪರಿಸರದ ಮಹಿಳಾ ಸುಮಾರು 60 ಹೆಚ್ಚು ಮನೆಯಲ್ಲಿ ಆಟಿಯ ಅಡುಗೆ ತಯಾರಿಸಿ ತಂದಿದ್ದರು, ಸಮಿತಿಯ ಮಹಿಳೆಯರಿಂದ ಮಕ್ಕಳಿಂದ ವೈವಿಧ್ಯಮಯ ನೃತ್ಯ, ಸಂಗೀತ ಕಾರ್ಯಕ್ರಮ ನಡೆಯಿತು,

ಅಪಾರ ಸಂಖ್ಯೆಯಲ್ಲಿ ತುಳು ಕನ್ನಡಿಗರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಆಷಾಢ ಮಾಸವು ಸಂಸ್ಕೃತಿ , ಸಂಪ್ರದಾಯ ಮಹತ್ವವನ್ನು ತಿಳಿಸುತ್ತದೆ:
ಗೀತಾ ಜಗನ್ನಾಥ್ ಮೆಂಡನ್ ,
ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಗೀತಾ ಜಗನ್ನಾಥ್ ಮೆಂಡನ್ ಮಾತನಾಡಿ, ಆಷಾಢ ಮಾಸವು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಮಹತ್ವವನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ,ಮಹಿಳಾಯರು ತಮ್ಮ ಕೈಯಾರೆ ಸಿದ್ಧಪಡಿಸಿದ ಹಲವಾರು ವಿಶೇಷ ತಿಂಡಿಗಳು ಸವಿರುಚಿಗಳು ತುಳುನಾಡಿನ ಅಡುಗೆಯ ಸೊಗಡನ್ನು ಸವಿಯುವ ಅವಕಾಶ ನೀಡಿದ್ದಾರೆ.ಅಟಿ ಕಡಂಜೆ ಯ ವೇಷಭೂಷಣಗಳು ನೈಜತೆಯನ್ನು ತುಂಬಿತ್ತು. ಮಹಿಳಾ ವಿಭಾಗದ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕಾರ್ಯ ಕ್ರಮ ಯಶಸ್ವಿಯಾಗುವಲ್ಲಿ ಕ್ಷಮಿಸಿದ್ದಾರೆ ಶಮಿಸಿದ್ದಾರೆ
ಎಂದು ಹೇಳಿದರು.

ನ್ಯಾ. ಜಗನ್ನಾಥ್ ಶೆಟ್ಟಿ ಪಣಿಯೂರು