ಹಳೆಯ ಹಿಂದಿ ಗೀತೆಗಳನ್ನು ಮೆಲುಕು ಹಾಕುವಂತೆ ಮಾಡುವುದಕ್ಕಾಗಿ ಕುಂಬಳೆ ಬ್ರದರ್ಸ್ ಡಾಕ್ಟರ್ ಅನಂತ ಪ್ರಭು ಹಾಗೂ ನರಸಿಂಹ ಪ್ರಭು ಅವರ ಸುಹಾನ ಸಫರ್ ಮತ್ತು ರಿಮ್ ಜಿಮ್ ಗಿರೇ ಸಾವನ್ ಹಾಡಿನ ಕಾರ್ಯಕ್ರಮವನ್ನು ಜುಲೈ 26ರಂದು ಮಂಗಳೂರು ಕದ್ರಿ ರಸ್ತೆಯ ಸುಜೀರ್ ಸಿ ವಿ ನಾಯಕ್ ಹಾಲಿನಲ್ಲಿ ಆಯೋಜಿಸಿರುತ್ತಾರೆ. ಸುಮನ್ ಕಲ್ಯಾಣ್ಪುರ ಮತ್ತು ಎಸ್ ಜಾನಕಿ ಅವರು 1955 ರಿಂದ 85ರ ನಡುವಿನಲ್ಲಿ ಹಾಡಿದ ಗೀತೆಗಳು ಮತ್ತೆ ಅನುರಣಿಸಲಿವೆ.
ಕುಂಬಳೆ ಸಹೋದರರು ಇದೇ ಸಂದರ್ಭದಲ್ಲಿ 25,000 ರೂ.ಗಳನ್ನು ಆರೋಗ್ಯ ಸಲಕರಣೆಗಳನ್ನು ಒದಗಿಸುವ ಸಲುವಾಗಿ ಎರಡು ಚಾರಿಟೇಬಲ್ ಸಂಸ್ಥೆಗಳಿಗೆ ಪ್ರದಾನಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕುಂಬ್ಳೆ ನರಸಿಂಹ ಪ್ರಭು ತಿಳಿಸಿದರು. ಮಂಗಳೂರು ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಹೇಮಾ ರಾವ್ ಸ್ವಾಗತಿಸಿದರು. ಖಜಾಂಚಿ ಸೀಮಾ ವಿ ಮೈಯ್ಯ ವಂದಿಸಿದರು.

