ಕಲಾಕ್ಷೇತ್ರ: 76 ನೇ ಸ್ಥಾಪನಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ

0
7

ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರ ದ 76 ನೇ ಸ್ಥಾಪನಾ ದಿನಾಚರಣೆ ಯು ಸಂಸ್ಥೆಯ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಜರಗಿತು. ಸಭಾಧ್ಯಕ್ಷತೆಯನ್ನು ಹಿರಿಯ ಜಾನಪದ ವಿದ್ವಾಂಸ, ಅಮೃತ ಮಹೋತ್ಸವ ಸಮಿತಿಯ ಸಂಚಾಲಕ ಬನ್ನಂಜೆ ಬಾಬು ಅಮೀನ್ ವಹಿಸಿದ್ದರು, ಸಂಘದ ಸ್ಥಾಪಕರು ಹಾಗೂ 75 ವರ್ಷ ಗಳ ಕಾಲ ಮುನ್ನಡೆಸಿಕೊಂಡು ಬಂದ ಮಹನೀಯರನ್ನು ನಾವು ಈ ದಿನ ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ, ನಿರಂತರ ಕಲಾ ಚಟುವಟಿಕೆ ನಡೆಸುತ್ತಾ ಬರುವ ಮೂಲಕ ಹಿರಿಯರ ಆಶಯವನ್ನು ಸಾರ್ಥಕಗೊಳಿಸುವ ಕಾರ್ಯ ವನ್ನು ಸಂಸ್ಥೆ ಯ ಆಡಳಿತ ಮಂಡಳಿ ನಡೆಸಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಜಾನನ ಯಕ್ಷಗಾನ ಕಲಾಮಂಡಳಿ ತೊಟ್ಟಂ ಇದರ ಸ್ಥಾಪಕ ಭೋಜಪ್ಪ ಸಾಲ್ಯಾನ್ ಇವರು ಕಲಾಕ್ಷೇತ್ರ ದ ಕಾರ್ಯಕ್ರಮ ಗಳಲ್ಲಿ ಹಲವಾರು ವರ್ಷಗಳ ಕಾಲ ಭಾಗವಹಿಸಿದನ್ನು ನೆನಪಿಸಿ ಕೊಂಡರು, ಹವ್ಯಾಸಿ ಯಕ್ಷಗಾನ ರಂಗದಲ್ಲಿ ಕಲಾಕ್ಷೇತ್ರ ದ ಪಾತ್ರ ದೊಡ್ಡದು ಎಂದರು,ಕಲಾಕ್ಷೇತ್ರದ ಪೋಷಕ ವಿಶ್ವನಾಥ ಶೆಣೈ ಮುಖ್ಯ ಅಥಿತಿ ಗಳಾಗಿ ಭಾಗವಹಿಸಿದ್ದರು, ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಜಿ ಬಾಬು ಗೌಡ, ಹಿರಿಯ ಸದಸ್ಯರಾದ ಅಣ್ಣಯ್ಯ ಪಾಲನ್, ಶಿವ ಪಾಲನ್, ಗುರುವ ಸುವರ್ಣ ಬನ್ನಂಜೆ ನಾಗರಾಜ ಉಪಾಧ್ಯ ಮಾರ್ಪಳ್ಳಿ, ಕೋಶಾಧಿಕಾರಿ ನರಸಿಂಹ ಎನ್ ಆರ್, ಕಲಾಕಾರ್ಯದರ್ಶಿ ಶ್ರೀಧರ್ ಭಟ್,ಕಾರ್ಯಕಾರಿ ಸದಸ್ಯರಾದ ರಮೇಶ್ ಕೋಟ್ಯಾನ್, ಅನಿಲ್ ಕುಮಾರ್ ಅಡೂರು , ಸುಗಂಧಿ ಆಚಾರ್ಯ ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು, ಅಧ್ಯಕ್ಷ ಕೇಶವ ಮೂರ್ತಿ ಬೆಲ್ಪತ್ರೆ ಸ್ವಾಗತಿಸಿ ಪ್ರಸ್ತಾವನೆ ಗೈದರು, ಡಾ. ರಮೇಶ್ ಚಿಂಬಾಲ್ಕರ್ ಧನ್ಯವಾದ ಸಮರ್ಪಿಸಿದರು, ಕಾರ್ಯದರ್ಶಿ ಗಣೇಶ್ ಕೋಟ್ಯಾನ್ ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತ್ರಿಶಂಕು ಚರಿತ್ರೆ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.