ಮೂಡುಬಿದಿರೆ ಮೊಸರು ಕುಡಿಕೆ ಉತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆ

0
19

ಮೂಡುಬಿದಿರೆ ಗೋಪಾಲಕೃಷ್ಣ ದೇವಸ್ಥಾನದ 110 ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಂದರ್ಭದಲ್ಲಿ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ನಡೆಸುವ 40ನೇ ವರ್ಷದ ಸಾಂಸ್ಕೃತಿಕ ಕಲಾಪಗಳ ಆಮಂತ್ರಣ ಪತ್ರಿಕೆಯನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ಸಮಾಜ ಮಂದಿರದಲ್ಲಿ ಬಿಡುಗಡೆಗೊಳಿಸಿ ಮೊಸರು ಕುಡಿಕೆ ಉತ್ಸವ, ಸಾರ್ವಜನಿಕ ಗಣೇಶೋತ್ಸವ ಜಿಲ್ಲೆಯಲ್ಲೇ ಮಾದರಿ ಉತ್ಸವಗಳಾಗಿ ಊರಿಗೆ ಹೆಸರು ತರುತ್ತಿವೆ ಎಂದರು.

ಮಾಜಿ ಸಚಿವ, ಸಂಘಟನೆಯ ಗೌರವಾಧ್ಯಕ್ಷ ಕೆ.ಅಭಯಚಂದ್ರ ಜೈನ್ ಭವ್ಯ ಪರಂಪರೆಯ ಉತ್ಸವ ಯಶಸ್ವಿಯಾಗಿ ಮುನ್ನಡೆಯುತ್ತಿರಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಶ್ರಿಪತಿ ಭಟ್, ಆರ್.ಕೆ.ಭಟ್, ಅಶೋಕ್ ಕಾಮತ್, ಪ್ರಭಾಚಂದ್ರ ಜೈನ್, ರಾಜೇಂದ್ರ ಜೈನ್, ಹಾಜರಿದ್ದರು.

ಸಂಘಟನೆಯ ಕಾರ್ಯದರ್ಶಿ ಸುಶಾಂತ್ ಕರ್ಕೇರಾ ಸ್ವಾಗತಿಸಿದರು. ಅಧ್ಯಕ್ಷ ಸಂತೋಷ್ ಕುಮಾರ್ ಆ.23ರಂದು 35ನೇ ವರ್ಷದ ಮುದ್ದುಕೃಷ್ಣ ವೇಷ ಸ್ಪರ್ಧೆ, ಸೆ.5ರಂದು ಸಾಂಸ್ಕೃತಿಕ ಕಲಾಪಗಳು ನಡೆಯಲಿದೆ ಎಂದು ಸುರೇಶ್ ರಾವ್ ತಿಳಿಸಿದರು.