ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಕಜೆ ನಿವಾಸಿ, 25 ವರ್ಷದ ಕೂಲಿ ಕಾರ್ಮಿಕ ರಾಜೇಶ್ ಕೆ. ಅವರು ಗಂಭೀರ ಅಪಘಾತಕ್ಕೊಳಗಾಗಿ ಚಿಕಿತ್ಸೆಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸಾರ್ವಜನಿಕರ ನೆರವಿಗಾಗಿ ಮನವಿ ಮಾಡಿದ್ದಾರೆ.
ಮರದ ಕೊಂಬೆ ಕಡಿಯುವ ವೇಳೆ ಸಂಭವಿಸಿದ ಅಪಘಾತದಲ್ಲಿ ರಾಜೇಶ್ ಅವರ ಎಡಗಾಲಿಗೆ ತೀವ್ರ ಗಾಯವಾಗಿ ಮುರಿತ ಉಂಟಾಗಿದೆ. ಇದುವರೆಗೆ 12 ಶಸ್ತ್ರಚಿಕಿತ್ಸೆಗಳು ನಡೆದಿದ್ದು, ವೈದ್ಯರ ಸಲಹೆಯಂತೆ ಮುಂದಿನ ಚಿಕಿತ್ಸೆಗೆ ₹3 ಲಕ್ಷಕ್ಕೂ ಅಧಿಕ ವೆಚ್ಚ ಅಗತ್ಯವಿದೆ.
ಬಡ ಕುಟುಂಬಕ್ಕೆ ಸೇರಿದ ರಾಜೇಶ್ ಅವರು ಕೂಲಿ ಕೆಲಸವನ್ನೇ ಜೀವನೋಪಾಯವಾಗಿಸಿಕೊಂಡಿದ್ದು, ಚಿಕಿತ್ಸೆಯ ಭಾರವನ್ನು ಭರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆದ್ದರಿಂದ ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ತಮ್ಮ ಕೈಲಾದ ನೆರವು ನೀಡುವಂತೆ ಕುಟುಂಬ ಮನವಿ ಮಾಡಿಕೊಂಡಿದೆ.
ಆರ್ಥಿಕ ನೆರವು ನೀಡಲು ಸಂಪರ್ಕಿಸಿ:
📞 ರಾಜೇಶ್ ಕೆ. – 78992 79860
📲 ಗೂಗಲ್ ಪೇ / ಫೋನ್‌ಪೇ ಮೂಲಕ ಸಹಾಯಧನ ಕಳುಹಿಸಬಹುದು.

