ಕರ್ನಾಟಕ ಜಾನಪದ ಪರಿಷತ್ತು ಬಂಟ್ವಾಳ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0
36

ಬಂಟ್ವಾಳ : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಬಂಟ್ವಾಳ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಆಯ್ಕೆ ಮಾಡಿ ನೇಮಕಗೊಳಿಸಲಾಗಿದೆ

​ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಅನುಮೋದನೆಯ ಮೇರೆಗೆ,…

ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್‌ಬೈಲ್ ಅವರು ಜಿಲ್ಲಾ ಪದಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಅಲ್ಲದೆ, ಬಂಟ್ವಾಳ ತಾಲೂಕು ಉಸ್ತುವಾರಿ ಹಾಗೂ ವೀಕ್ಷಕರಾಗಿ ಟಿಪೇಶ್ ಅಮೀನ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


​ಗೌರವ ಅಧ್ಯಕ್ಷರು- ಗಣೇಶ್ ಶೆಟ್ಟಿ (ಗೋಲ್ತಮಜಲು), ಅಧ್ಯಕ್ಷರು: ಕೆ. ಸತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ: ಶಂಕರ್, ಉಪಾಧ್ಯಕ್ಷರು: ಹೆಚ್. ಕೆ. ನಯನಾಡು,
ಕೋಶಾಧಿಕಾರಿ: ರವಿಚಂದ್ರ, ಸಹ ಕಾರ್ಯದರ್ಶಿ: ಚಂದ್ರಾವತಿ, ಸಾಂಸ್ಕೃತಿಕ ಕಾರ್ಯದರ್ಶಿ: ವೈಶಾಲಿ, ಸಂಘಟನಾ ಕಾರ್ಯದರ್ಶಿ: ಸಂತೋಷ್ ಮಾಸ್ಟರ್, ಪತ್ರಿಕಾ ಪ್ರತಿನಿಧಿ: ಸಂತೋಷ್.

ಗೌರವ ಸಲಹೆಗಾರರು: ಮನೋಜ್ ಕನಪಾಡಿ, ಭಾಸ್ಕರ್ ರಾವ್, ಮತ್ತು ಸುಧೀರ್ ಶೆಟ್ಟಿ ಇವರುಗಳನ್ನು ಆಯ್ಕೆ ಮಾಡಲಾಗಿದೆ.

​ಜಾನಪದ ಕಲೆಯ ಬೆಳವಣಿಗೆಯ ಅಗತ್ಯತೆ.

​ಜಾನಪದವು ನಮ್ಮ ಮಣ್ಣಿನ ಸಂಸ್ಕೃತಿ ಮತ್ತು ಇತಿಹಾಸವನ್ನು ಜೀವಂತವಾಗಿಡುವ ಜೀವನಾಡಿಯಾಗಿದೆ. ಆಧುನಿಕತೆಯ ಅಲೆಯ ನಡುವೆ ನಶಿಸಿಹೋಗುತ್ತಿರುವ ನಮ್ಮ ಗ್ರಾಮೀಣ ಸಂಸ್ಕೃತಿ, ಆಚಾರ-ವಿಚಾರಗಳು, ತಲೆಮಾರಿನಿಂದ ಹರಿದುಬಂದ ಹಾಡುಗಳು ಹಾಗೂ ಸಾಂಪ್ರದಾಯಿಕ ಕಲಾಪ್ರಕಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಜಾನಪದ ಸಂಘಟನೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಜಾನಪದದ ಬೆಳವಣಿಗೆಯಿಂದ ಮಾತ್ರವೇ ನಮ್ಮ ನಿಜವಾದ ಬೇರುಗಳು ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಕಾಪಾಡಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಬಂಟ್ವಾಳ ತಾಲೂಕು ಘಟಕವು ಜಾನಪದದ ಉಳಿವಿಗೆ ಮತ್ತು ಬೆಳವಣಿಗೆಗೆ ಸಕ್ರಿಯವಾಗಿ ಶ್ರಮಿಸಲಿದೆ ಎನ್ನಲಾಗಿದೆ.

ವರದಿ -ಮಂದಾರ ರಾಜೇಶ್ ಭಟ್