ಯಕ್ಷಗಾನದ ವೈಭವ ಅನಾವರಣ; ವಿಶ್ವ ಭಾರತಿ ಯಕ್ಷಸಂಭ್ರಮ ಸಮಾರೋಪ ಯಶಸ್ವಿ

0
46

ವಿಶ್ವ ಭಾರತಿ ಯಕ್ಷ ಸಂಜೀವಿನಿ ರಿಜಿಸ್ಟರ್ಡ್ ಮುಡಿಪು ತುಳು ಶಿವಳ್ಳಿ ಸಭಾಭವನ ಬಿಸಿ ರೋಡು ಇಲ್ಲಿ ವಿಶ್ವ ಭಾರತೀ ಯಕ್ಷಸಂಭ್ರಮ2026 ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಮಾರೋಪ ಸಮಾರಂಭ ಮಾಜಿ ಸಚಿವ ಬಿ ರಮಾನಾಥ ರೈ ಅಧ್ಯಕ್ಷತೆಯಲ್ಲಿ ಜರಗಿತು .

ಸಜಿೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ತುಳುಶಿವಳ್ಳಿ ಸಭಾ ಬಂಟ್ವಾಳ ತಾಲೂಕು ಅಧ್ಯಕ್ಷ ರಾಜಾರಾಮ್ ಭಟ್,ಯಕ್ಷಗಾನ ಸಂಘಟಕ ಡಿ ಭುಜಬಲಿ ಧರ್ಮಸ್ಥಳ, ಡಾ ಶಿವಪ್ರಸಾದ ಶೆಟ್ಟಿ, ಸೋಮನಾಥ ಕಾರ0 ತ ಬೆಂಗಳೂರು, ಮೊದಲಾದವರು ಭಾಗವಹಿಸಿದರು ಇದೇ ಸಂದರ್ಭದಲ್ಲಿ ಶಿಕ್ಷಕ, ಯಕ್ಷಗಾನ ಕಲಾವಿದ ಮಾದವನಾವಡ ದಂಪತಿ ವರ್ಕಾಡಿ ಹಾಗೂ ಸಂಗೀತ ವಿದ್ವಾನ್ ಡಾ ಸೋಮಶೇಖರ ಮಯ್ಯ ಇವರನ್ನು ಸನ್ಮಾನಿಸಲಾಯಿತು.

ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಪ್ರಶಾಂತ್ ಹೊಳ್ಳರ ನೇತೃತ್ವದಲ್ಲಿಅಂಗದ ಸಂಧಾನ ಯಕ್ಷಗಾನ ತಾಳಮದ್ದಳೆ ನಡೆಯಿತು.