ಕಡಂದಲೆ ಅಂಗನವಾಡಿ ಪುಟಾಣಿ ಗಳಿಗೆ ಮೇಜು ಪುಸ್ತಕ ವಿತರಣೆ

0
62

ಉತ್ತಮ ಕಲಿಕೆಗೆ ಉಜ್ವಲ ಭವಿಷ್ಯ – ಸುನಿಲ್ ಮೆಂಡೋನ್ಸಾ

ಮೂಡುಬಿದಿರೆ : ಜು. 27ರಂದು ಕಡಂದಲೆ ವಿದ್ಯಾಗಿರಿ ಅಂಗನವಾಡಿ ಪುಟಾಣಿ ಮಕ್ಕಳಿಗೆ ಎರಡನೇ ಮನೆಯಿದ್ದಂತೆ, ಅಲ್ಲಿನ ಶಿಕ್ಷಕಿ ಮಕ್ಕಳಿಗೆ ಎರಡನೇ ತಾಯಿಯಂತೆ. ಸರ್ಕಾರಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ದೊರೆಯುವ ಪ್ರೀತಿ, ಮಮತೆ ಮತ್ತು ಆರೈಕೆ ಎಲ್ಲಿಯೂ ಸಿಗುವುದಿಲ್ಲ ಎಂದು ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್‌ನ ಸದಸ್ಯ ಸುನಿಲ್ ಮೆಂಡೋನ್ಸಾ ಹೇಳಿದರು.

ಅವರು ಕಡಂದಲೆಯ ವಿದ್ಯಾಗಿರಿ ಅಂಗನವಾಡಿಯಲ್ಲಿ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ವತಿಯಿಂದ ಮೂರು ಮೇಜುಗಳು ಹಾಗೂ ಮಕ್ಕಳಿಗೆ ಬರವಣಿಗೆ ಪುಸ್ತಕ ಮತ್ತು ಪೆನ್ಸಿಲ್‌ಗಳನ್ನು ವಿತರಿಸಿ ಮಾತನಾಡಿದರು.

ವಿದ್ಯಾಗಿರಿಯ ಅಂಗನವಾಡಿಯನ್ನು ನೋಡಿದಾಗ ತುಂಬಾ ಸಂತೋಷವಾಯಿತು. ಇಲ್ಲಿ ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸಲಾಗಿದೆ. ನಮ್ಮ ತಂಡದ ವತಿಯಿಂದ ಮಕ್ಕಳಿಗೆ ಉಪಯೋಗವಾಗುವಂತಹ ವಸ್ತುಗಳನ್ನು ನೀಡಿರುವುದಕ್ಕೆ ಸಂತಸವಾಗಿದ್ದು, ಮುಂದೆಯೂ ಅಗತ್ಯ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಟಿ.ಎನ್. ಕೆಂಬಾರೆ ಅವರು ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಬೆನೆಡಿಕ್ಟ್ ದಾಂತಿಸ್ ಅವರು ಅಂಗನವಾಡಿಯನ್ನು ತಮ್ಮ ಮನೆಯಂತೆ ಕಾಳಜಿಯಿಂದ ನಿರ್ವಹಿಸುತ್ತಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಆರೈಕೆ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಲಡ್ಕ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಜಗದೀಶ್ ಟಿ. ಕೋಟ್ಯಾನ್ ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ವಿಲ್ಫ್ರೆಡ್ ದಾಂತಿಸ್, ಪತ್ರಕರ್ತ ಜಗದೀಶ್ ಪೂಜಾರಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಬೆನೆಡಿಕ್ಟ್ ದಾಂತಿಸ್ ಉಪಸ್ಥಿತರಿದ್ದರು.