ಉಡುಪಿ: ಜಿಲ್ಲಾದ್ಯಂತ ಆಯಾಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಳೆಯದಾದ ಪೊಲೀಸ್ ಬ್ಯಾರಿಕೇಡ್ಗಳ ಮರುನವೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿ ರಾಮ್ ಶಂಕರ್ ಮಾತನಾಡಿ, ಪ್ರಸ್ತುತ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 59 ಸಿಂಗಲ್ ಪೊಲೀಸ್ ಬ್ಯಾರಿಕೇಡ್ಗಳು ಹಾಗೂ 61 ಡಬಲ್ ಪೊಲೀಸ್ ಬ್ಯಾರಿಕೇಡ್ಗಳು ಸೇರಿ ಒಟ್ಟು 120 ಪೊಲೀಸ್ ಬ್ಯಾರಿಕೇಡ್ಗಳನ್ನು ಡಬಲ್ ಬ್ಯಾರಿಕೇಡ್ಗಳಾಗಿ ಮರು ನವೀಕರಣಗೊಳಿಸಲಾಗಿದ್ದು, ಮುಂದಿನ ಎರಡು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ಕಲ್ಕೂರ ರೆಫ್ರಿಜರೇರ್ಟಸ್ ವತಿಯಿಂದ ಏಕರೂಪದ ವಿನ್ಯಾಸ, ಗುಣಮಟ್ಟ ಮತ್ತು ಬಳಕೆಯ ಮಾನದಂಡಗಳಿಗೆ ಅನುಗುಣವಾಗಿ ಸಂಪೂರ್ಣವಾಗಿ ಮರುನವೀಕರಣಗೊಳಿಸಿ ಆಯಾಯಾ ಪೊಲೀಸ್ ಠಾಣೆಗಳಿಗೆ ನೀಡಲಾಗುವುದು ಎಂದರು.
ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ 8 ಪೊಲೀಸ್ ಬ್ಯಾರಿಕೇಡ್ಗಳನ್ನು ಸಂಪೂರ್ಣವಾಗಿ ಮರುನವೀಕರಣಗೊಳಿಸಿ, ನಿಗದಿತ ಗುಣಮಟ್ಟ ಮತ್ತು ಏಕರೂಪತೆಯೊಂದಿಗೆ ಮೇಲ್ದರ್ಜೆಗೇರಿಸಲಾಗಿದೆ ಎಂದರು. ಕಲ್ಕೂರ ರೆಫ್ರಿಜರೇರ್ಟಸ್ ಮಾಲೀಕ ರಂಜನ್ ಕಲ್ಕೂರ್ ಉಪಸ್ಥಿತರಿದ್ದರು.

