ಕಾಸರಗೋಡು ಜಿಲ್ಲಾ ಕುಲಾಲ ಸಂಘ, ಮಂಜೇಶ್ವರ ಶಾಖೆಯ ವಾರ್ಷಿಕ ಮಹಾಸಭೆ ಹಾಗೂ ಆಟಿದಕೂಟ

0
21

ಮಂಜೇಶ್ವರ : ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಶಾಖೆಯ ಮಹಾಸಭೆ ಹಾಗೂ ಆಟಿದ ಕೂಟ ಕಾರ್ಯಕ್ರಮವು ಜಿಲ್ಲಾ ಕುಲಾಲ ಸಮುದಾಯ ಭವನ ಕುಂಜತ್ತೂರು ತೂಮಿನಾಡುನಲ್ಲಿ 26 ಜುಲೈ 2026ರಂದು ಜರಗಿತು.ಕಾರ್ಯಕ್ರಮವನ್ನು ಲಕ್ಕಣಪಾಲು ಮೂಲಸ್ಥಾನದ ಗೌರವಾಧ್ಯಕ್ಷ ರಾದ ಕೊರಗಪ್ಪ ಬಂಗೇರ ಮಣಿಹಳ್ಳ ದೀಪಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.ಮಂಜೇಶ್ವರ ಕುಲಾಲ ಶಾಖೆಯ ಅಧ್ಯಕ್ಷರಾದ ಗೋಪಾಲ ಸಾಲ್ಯಾನ್ ಕುಂಜತ್ತೂರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಘದ ಅಧ್ಯಕ್ಷರಾದ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ,ತಾಲೂಕು ಪ್ರಚಾರ ಕಾರ್ಯಪ್ರಮುಖ್ ಪ್ರಶಾಂತ್ ಬಡಾಜೆ, ಮಂಜೇಶ್ವರ ಸರ್ವಿಸ್ ಕೋ. ಆಪರೇಟಿವ್ ಬ್ಯಾಂಕ್ ನ ನಿರ್ದೇಶಕರಾದ ರಾಮಚಂದ್ರ ಕುಲಾಲ್ ಕಣ್ವತೀರ್ಥ ಭಾಗವಹಿಸಿದರು. ಆಟಿ ತಿಂಗಳ ವಿಶೇಷತೆ ಆಚರಣೆ ಬಗ್ಗೆ ಶಾರದಾ ಪಿ. ಯು. ಕಾಲೇಜು ಮಂಗಳೂರಿನ ಉಪನ್ಯಾಸಕರಾದ ರಂಜನಿ ಅಗರ್ ತಬೈಲು ರವರು ಮಾಹಿತಿ ನೀಡಿದರು.ದೀಕ್ಷಾ ವುಡ್ ಇಂಡಸ್ಟ್ರೀಸ್ ನ ಮಾಲಕರಾದ ಬಾಲಕೃಷ್ಣ ಬಿ ಗೌರವ ಉಪಸ್ಥಿತರಿದ್ದರು.

ಮಂಜೇಶ್ವರ ಕುಲಾಲ ಶಾಖೆಯ ವತಿಯಿಂದ ಹಿರಿಯ ಕೃಷಿಕರಾದ ರಾಮ ಕುಲಾಲ್ ಮಜಲು ಕುಂಜತ್ತೂರು ಹಾಗೂ ದಿನೇಶ್ ಕುಲಾಲ್ ಅಂಬಿತ್ತಡಿ ಉದ್ಯಾವರ ಮಾಡರವರಿಗೆ ಗಣ್ಯರ ಉಪಸ್ಥಿತಿ ಯಲ್ಲಿ ಗೌರವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರೋತ್ಸಾಹಕ ವಿದ್ಯಾನಿಧಿಗೆ ಆಯ್ಕೆಯಾದ ಇಬ್ಬರು ವಿದ್ಯಾರ್ಥಿನಿಯರಿಗೆ ವಿದ್ಯಾನಿಧಿಯನ್ನು ವಿತರಿಸಲಾಯಿತು.

ಕಳೆದ ಸಾಲಿನ ಕಾರ್ಯಕಾರಿ ಸಮಿತಿಯನ್ನು ಮುಂದುವರಿಸುವ ಬಗ್ಗೆ ಸಭೆ ಅನುಮೋದನೆ ನೀಡಿತು.ಜತೆ ಕಾರ್ಯದರ್ಶಿ ಆನಂದ ಸಾಲ್ಯಾನ್ ವರದಿ ವಾಚಿಸಿ ಕೋಶಾಧಿಕಾರಿ ಜಗದೀಶ್ ಕುಲಾಲ್ ಲೆಕ್ಕಪತ್ರ ಮಂಡಿಸಿದರು. ವಿವಿಧ ಸ್ವರ್ಧೆಗಳು, ನೃತ್ಯ ಕಾರ್ಯಕ್ರಮಗಳು, ಆಟಿಮಾಸದ ವಿಶೇಷ ಭೋಜನ ನಡೆಯಿತು. ಕಾರ್ಯದರ್ಶಿ ಈಶ್ವರ್ ಕುಲಾಲ್ ಕಣ್ವತೀರ್ಥ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ತಾರಾನಾಥ ಕುಲಾಲ್ ವಂದಿಸಿದರು.