ಶ್ರೀ ಮಹಾವೀರ ಕಾಲೇಜಿನ ಬಿಕಾಂ ಅಂತಿಮ ಸೆಮಿಸ್ಟರ್‌ನಲ್ಲಿ ಶ್ರವಣ್ ಅವರಿಗೆ ಉತ್ತಮ ಅಂಕ

0
16

ಮೂಡುಬಿದಿರೆ : 2025–26ನೇ ಶೈಕ್ಷಣಿಕ ವರ್ಷದ ಬಿಕಾಂ (B.Com) ಆರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿ ಹೊಸಬೆಟ್ಟುವಿನ ಶ್ರವಣ್ ಅವರು ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

650 ಅಂಕಗಳಿಗೆ 629 ಅಂಕಗಳನ್ನು (ಶೇ. 96.77) ಗಳಿಸಿರುವ ಶ್ರವಣ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಪ್ರತಿಭೆ ಹಾಗೂ ಪರಿಶ್ರಮವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರ ಈ ಸಾಧನೆಯು ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದು, ಶಿಕ್ಷಕರು, ಸಹಪಾಠಿಗಳು ಹಾಗೂ ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದೆ.

ಶ್ರವಣ್ ಅವರು ದಿ. ಶಂಕರ್ ಮಡಿವಾಳ ಹಾಗೂ ಸುಜಯ ದಂಪತಿಯ ಪುತ್ರರಾಗಿದ್ದು, ತಮ್ಮ ನಿರಂತರ ಪರಿಶ್ರಮ, ಶಿಸ್ತು ಮತ್ತು ಅಧ್ಯಯನದ ಆಸಕ್ತಿಯಿಂದ ಈ ಸಾಧನೆ ಮಾಡಿದ್ದಾರೆ ಎಂದು ಕಾಲೇಜಿನ ಉಪನ್ಯಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.