ಮುಲ್ಕಿ : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶ

0
22

ಮುಲ್ಕಿ : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ದಾಖಲಾದ ಎನ್ ಡಿ ಪಿ ಎಸ್ ಕಾಯ್ದೆ ಹಾಗೂ ಮಾದಕ ವಸ್ತುಗಳ ಕೆಲವು ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಸುಮಾರು 82 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿಯಂತೆ ಕೋಲ್ನಾಡಿನ ಕೈಗಾರಿಕಾ ಪ್ರದೇಶದ ಸಸ್ಟೈನೇ ಬಿಲಿಟಿ ಹೆಲ್ತ್ ಕೇರ್ ಸೊಲ್ಯೂಷನ್ ಕಂಪನಿಯಲ್ಲಿ ನಾಶಪಡಿಸಲಾಯಿತು.

ಈ ಸಂದರ್ಭ ಮಂಗಳೂರು ಪೊಲೀಸ್‌ ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ, ಸಾಗಾಟ ಹಾಗೂ ಸೇವನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರಂತರವಾಗಿ ವಿಶೇಷ ಕಾರ್ಯಾಚರಣೆ ನಡೆಸಿ ಅಪರಾಧ ಪತ್ತೆ ಹಚ್ಚಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು 2026ನೇ ಸಾಲಿನಲ್ಲಿಒಟ್ಟು 87ಪ್ರಕರಣಗಳನ್ನು ದಾಖಲಿಸಿ 157 ಪೆಡ್ಲರ್ಸ್ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.

ಆರೋಪಿಗಳಿಂದ 8,18,30,130 ರೂ ಬೆಲೆಬಾಳುವ ಸುಮಾರು 148 ಕೆಜಿ 615 ಗ್ರಾಂ ಗಾಂಜಾ, 7.165ಗ್ರಾಂ ಎಂಡಿಎಂಎ, 1 ಕೆಜಿ705ಗ್ರಾಂ ಹೈಡ್ರೋ ವೀಡ್ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಇದೇ ಅವಧಿಯಲ್ಲಿ ಮಾದಕ ವಸ್ತು ಸೇವನೆ ಸಂಬಂಧಿಸಿ ದಂತೆ 463 ವ್ಯಕ್ತಿಗಳ ವಿರುದ್ಧ 356 ಪ್ರಕರಣಗಳನ್ನು ದಾಖಲಿಸಲಾಗಿದೆ.

ಅವರು ಮಾತನಾಡಿ ನ್ಯಾಯಾಲಯದ ಅನುಮತಿ ಪಡೆದು ಮಂಗಳೂರು ನಗರ ವ್ಯಾಪ್ತಿಯ 16 ಠಾಣೆಗಳ ಒಟ್ಟು 59 ಪ್ರಕರಣಗಳಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ 450 ಕೆಜಿ ಗಾಂಜಾ, 43 ಕೆಜಿ 260 ಗ್ರಾಂ ಎಂ ಡಿಎಂ ಎ, 80 ಗ್ರಾಂ ಚರ ಸ್, 880 ಗ್ರಾಂ ಹೈಡ್ರೋ ವೀಡ್ ಗಾಂಜಾ, ಒಂದು ಕೆಜಿ 200 ಗ್ರಾಂ ಭಾಂಗ್ ಸೇರಿದಂತೆ 82 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಸುಟ್ಟು ನಾಶಪಡಿಸಿ ವಿಲೇವಾರಿ ಮಾಡಲಾಯಿತು.

ನಾಶಪಡಿಸಲಾದ ಮಾದಕ ವಸ್ತುಗಳಲ್ಲಿ ಪ್ರಮುಖವಾಗಿ 2024ನೇ ಸಾಲಿನಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಸುಮಾರು 75 ಕೋಟಿ ಮೌಲ್ಯದ 37 ಕೆಜಿ ಎಂ.ಡಿಎಂಎ 2025 ನೇ ಸಾಲಿನಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಅಂದಾಜು 4.47 ಕೋಟಿ ಮೌಲ್ಯದ ಎಂ ಡಿ ಎಂ ಎ, ಕೊಣಾಜೆ ಪೊಲೀಸ್ ಠಾಣೆಯ ಸುಮಾರು 20 ಲಕ್ಷ ಮೌಲ್ಯದ 106 ಕೆಜಿ ಗಾಂಜಾ ಹಾಗೂ ಮೂಡಬಿದ್ರೆ ಪೊಲೀಸ್ ಠಾಣೆಯ ಸುಮಾರು 36 ಲಕ್ಷ ಮೌಲ್ಯದ 11 ಕೆಜಿ ಗಾಂಜಾ
ಮಾದಕ ವಸ್ತುಗಳನ್ನು ಸುಟ್ಟು ನಾಶ ಮಾಡಿ ವಿಲೇವಾರಿ ಮಾಡಲಾಗಿದೆ ಎಂದರು.

ಈ ಸಂದರ್ಭ ಕಮಿಷನರೇಟ್ ವ್ಯಾಪ್ತಿಯ ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ಮಿಥುನ್ ಎಚ್.ಎನ್ , ಡಿಸಿಪಿ ಕ್ರೈಂ ಕೆ ರವಿಶಂಕ‌ರ್, ಎಸಿಪಿ ಶ್ರೀಕಾಂತ್, ಸಿಸಿಆರ್‌ಬಿ ಗೀತಾ ಕುಲಕರ್ಣಿ ವಿವಿಧ ಪೊಲೀಸ್‌ ಠಾಣೆಯ ಇನ್ಸೆಕ್ಟರ್ ಗಳಾದ ಪ್ರಮೋದ್ ಕುಮಾರ್( ಮುಲ್ಕಿ ಮತ್ತು ಸುರತ್ಕಲ್),ರಫೀಕ್ (ಸಿ ಸಿ ಬಿ), ಬಾಲಕೃಷ್ಣ ಬಜಪೆ ಎಸ್ ಐ ಗಳಾದ ಮಲ್ಲಿಕಾರ್ಜುನ ಕಾವೂರು ರಾಘವೇಂದ್ರ ಮುಲ್ಕಿ, ಶೀತಲ್ ಅಲಗೂರು ಮಂಗಳೂರು ಉತ್ತರ, ವಿನಾಯಕ ಆರ್ ತೋರಗಲ್ ಬರ್ಕೆ,ಮನೋಹರ ಕದ್ರಿ,ಸಿದ್ದಪ್ಪ ಉರ್ವ, ರೇಖಾ ಪಾಂಡೇಶ್ವರ, ಜ್ಞಾನ ಶೇಖರ ಪಣಂಬೂರು,,ನಾಗರಾಜ್ ಕೊಣಾಜೆ, ಪ್ರತಿಭಾ ಮೂಡಬಿದ್ರೆ,ಯೋಗೀಶ್ವರನ್ ಕಂಕನಾಡಿ ನಗರ,ಕೋಲ್ನಾಡಿನ ಕೈಗಾರಿಕಾ ಪ್ರದೇಶದ ಸಸ್ಟೈನೇ ಬಿಲಿಟಿ ಹೆಲ್ತ್ ಕೇರ್ ಸೊಲ್ಯೂಷನ್ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಪ್ರಶಾಂತ್ ನಾಯಕ್‌ , ಪಡು ಪಣಂಬೂರು ಗ್ರಾಮ ಪಂಚಾಯತ್ ಮಾಜೀ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು, ಮುಲ್ಕಿ ನಗರ ಪಂಚಾಯತ್ ಮಾಜೀ ಸದಸ್ಯ ಭೀಮಾ ಶಂಕರ್ ಆರ್.ಕೆ. ಮತ್ತಿತರರು ಉಪಸ್ಥಿತರಿದ್ದರು.