ಆಗಸ್ಟ್ 2ರಂದು ಬೆಂಗಳೂರಿನಲ್ಲಿ ರಾಮಕ್ಷತ್ರಿಯ ವೃತ್ತಿಪರರ ಸಭೆ

0
6

ಬೆಂಗಳೂರು : ರಾಮಕ್ಷತ್ರಿಯರ ವೃತ್ತಿಪರರ ಸಮಾವೇಶದ ಯಶಸ್ವಿ ಆಯೋಜನೆಗೆ ಪೂರ್ವಭಾವಿಯಾಗಿ ಮಹತ್ವದ ಸಭೆಯು ಆಗಸ್ಟ್‌ 2ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ವಿಶ್ವರಾಮ ಕ್ಷತ್ರಿಯ ಮಹಾಸಂಘ (ರಿ) ಹಾಗೂ ಸಮಸ್ತ ರಾಮಕ್ಷತ್ರಿಯರು – ಬೆಂಗಳೂರು ಇವರ ಆಶ್ರಯದಲ್ಲಿ ನಡೆಯಲಿರುವ ಈ ಸಭೆಯು ಆಗಸ್ಟ್‌ 2 (ಭಾನುವಾರ) ಬೆಳಿಗ್ಗೆ 10 ಗಂಟೆಗೆ ವಿಜಯನಗರದ ಕದಂಬ ಸಾಮ್ರಾಟ್ (Kadamba Samrat) ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಈ ಸಭೆಯಲ್ಲಿ ವೈದ್ಯರು, ಇಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಮಕ್ಷತ್ರಿಯ ವೃತ್ತಿಪರರು ಭಾಗವಹಿಸಿ, ಮುಂದಿನ ದಿನಗಳಲ್ಲಿ ನಡೆಯಲಿರುವ ವೃತ್ತಿಪರರ ಸಮಾವೇಶದ ಯಶಸ್ವಿ ಆಯೋಜನೆ ಕುರಿತು ಚರ್ಚೆ ನಡೆಸಲಿದ್ದಾರೆ.

ಸಭೆಯಲ್ಲಿ ಸಮಾವೇಶದ ರೂಪುರೇಷೆ, ಸಂಘಟನಾ ಬಲವರ್ಧನೆ, ಸಮಾಜದ ವೃತ್ತಿಪರರನ್ನು ಒಂದೇ ವೇದಿಕೆಗೆ ತರಲು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ವಿವಿಧ ಸಲಹೆ-ಸೂಚನೆಗಳ ಬಗ್ಗೆ ಸಮಾಲೋಚನೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಸಮಸ್ತ ರಾಮಕ್ಷತ್ರಿಯ ಬಂಧುಗಳು ಹಾಗೂ ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಿ, ತಮ್ಮ ಅಮೂಲ್ಯ ಸಲಹೆ, ಸಹಕಾರ ಹಾಗೂ ಭಾಗವಹಿಸುವಿಕೆಯ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುವಂತೆ ವಿಶ್ವರಾಮ ಕ್ಷತ್ರಿಯ ಮಹಾಸಂಘ (ರಿ) ಮನವಿ ಮಾಡಿದೆ.