ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಮುರ ದಲ್ಲಿರುವ ಶಿವ ಸದನ ವಿಶೇಷ ಚೇತನರ ವಸತಿ ನಿಲಯದ ಮಕ್ಕಳ ವ್ಯಾಯಾಮಕ್ಕಾಗಿ ಶಿವ ಸದನದ ಶ್ರೇಯೋಭಿಲಾಶಿ ಓರ್ವರು ಸುಮಾರು30,000/ಮೌಲ್ಯದ ಸ್ಟ್ಯಾಂಡಿಂಗ್ ಫ್ರೇಮ್, ಗೈಟರ್, ರೂಟ್ ಹಗ್ಗರ್ ಬೆಲ್ಟ್ ಮುಂತಾದ ಸಲಕರಣೆಗಳನ್ನು ಒಳಗೊಂಡ ಉಪಕರಣವನ್ನು ವಿಶೇಷ ಚೇತನರ ಮಕ್ಕಳ ಶಾಲೆಗೆ ನೀಡಿರುವರು.
ವಿಶೇಷ ಚೇತನ ಮಕ್ಕಳು ನಡೆಯಲು ಅಥವಾ ಸ್ವತಹ ನಿಲ್ಲಲು ಸಾಧ್ಯವಾಗದ ಸಂದರ್ಭದಲ್ಲಿ ಸುರಕ್ಷಿತವಾಗಿ ನಿಲ್ಲಿಸುವ ಸಾಧನವೇ ಸ್ಟ್ಯಾಂಡಿಂಗ್ ಫ್ರೇಮ್:- .ಇದು ಮಕ್ಕಳ ದೇಹದ ಸರಿಯಾದ ಭಂಗಿಯನ್ನು ಕಾಪಾಡುತ್ತದೆ .ಕಾಲು, ಸೊಂಟ ಮತ್ತು ಬೆನ್ನಿನ ಸ್ನಾಯುಗಳು ಬಲಗೊಳ್ಳಲು ಸಹಾಯಮಾಡುತ್ತದೆ. ಮೂಳೆಗಳ ಬೆಳವಣಿಗೆ ಉತ್ತಮವಾಗುವುದರ ಜೊತೆಗೆ ರಕ್ತ ಸಂಚಾರ, ಜೀರ್ಣಕ್ರಿಯೆ, ಉಸಿರಾಟ, ಕರುಳು ಮತ್ತು ಮೂತ್ರಕೋಶಗಳ ಕಾರ್ಯನಿರ್ವಹಣೆ, ತಲೆಯ ಸರಿಯಾದ ಜೋಡಣೆ ,ಮೊಣಕಾಲು ಚಿಪ್ಪು ಕೀಲಿಗಳ ಚಲನಶೀಲತೆ ಯನ್ನು ಕಾಯ್ದುಕೊಳ್ಳುವುದು.
ಗೈಟರ್:- ಕಾಲುಗಳನ್ನು ಸರಿಯಾದ ಸ್ಥಾನದಲ್ಲಿ ಇರಿಸಲು ನೆರವಾಗುವ ಸಾಧನ. ನಿಲ್ಲುವ ವ್ಯಾಯಾಮ ತರಬೇತಿ ವೇಳೆ ಕಾಲುಗಳು ಒಳಗೆ ಅಥವಾ ಹೊರಗೆ ತಿರುಗದಂತೆ ತಡೆಯುತ್ತದೆ .
ರೋಟ ಹಗ್ಗರ್ :– ವ್ಯಾಯಾಮ ಅಥವಾ ತರಬೇತಿ ವೇಳೆ ಮಕ್ಕಳಿಗೆ ಹಿಡಿದುಕೊಳ್ಳಲು ಸಹಾಯ ಮಾಡುವ ಸುರಕ್ಷತಾ ಹಗ್ಗವಾಗಿದೆ. ಕೈ ಕಾಲಿನ ಸಮನ್ವಯವನ್ನು ಬೆಳೆಸಲು ಸಹಕಾರಿ.
ಹಗ್ಗರ್ ಬೆಲ್ಟ್ :-ಮಗುವಿನ ಸೊಂಟ ದೇಹವನ್ನು ಸುರಕ್ಷಿತವಾಗಿ ಹಿಡಿದಿಡುವ ಬೆಲ್ಟ್. ತರಬೇತಿ ವೇಳೆಯಲ್ಲಿ ಜಾರುವುದು ಬೀಳುವುದನ್ನು ತಡೆಯುತ್ತದೆ ಈ ಸಾಧನದ ಬಳಕೆಯಿಂದ ಮಕ್ಕಳ ದೈಹಿಕ ಬೆಳವಣಿಗೆ, ಸ್ನಾಯುಗಳ ಬಲ ಆತ್ಮವಿಶ್ವಾಸದ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಈ ಕೊಡುಗೆ ನೀಡಿದ ಅಭಿಮಾನಿಗಳಿಗೆ ಶಿವಸದನದ ಸರ್ವರೂ ಶುಭ ಹಾರೈಸಿದರು.

