ನೆಲ್ಲಿಕಾರು ಪ್ರೌಢಶಾಲಾ ಶಿಕ್ಷಕರ ವಿದಾಯ ಸಮಾರಂಭ

0
7


ವರದಿ ರಾಯಿ ರಾಜ ಕುಮಾರ್
ಮೂಡುಬಿದಿರೆ ತಾಲೂಕು ನೆಲ್ಲಿಕಾರು ಪ್ರೌಢಶಾಲಾ ಶಿಕ್ಷಕ ಶಿವಾನಂದ ಕಾಯ್ಕಿಣಿ ಅವರ ವಿದಾಯ ಸಮಾರಂಭ ಜುಲೈ 31 ರಂದು ಶಾಲೆಯಲ್ಲಿ ನಡೆಯಿತು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಅಭಿವೃದ್ಧಿ ಸಮಿತಿಯ ಹರೀಶ್ ಆಚಾರ್ಯ, ಶಬ್ಬೀರ್, ಇಲಾಖೆಯ ಜ್ಞಾನೇಶ್, ಗಣಪತಿ ನಾಯಕ್, ಹಾಗೂ ಇತರರು ಕಾಯ್ಕಿಣಿ ಅವರ ಕಾರ್ಯ ಚತುರತೆ, ಶಾಲೆಗಾಗಿ ಮಾಡಿದ ಕಾರ್ಯಗಳು, ವಿವಿಧ ಇಲಾಖೆಗಳಲ್ಲಿ ನಡೆಸಿದ ಅತ್ಯುತ್ತಮ ಕಾರ್ಯಗಳನ್ನು ನೆನೆಸಿಕೊಂಡು ಶುಭ ಹಾರೈಸಿದರು.
ಭೈರವೇಶ್ವರ ಭಟ್ ಸ್ವಾಗತಿಸಿದರು. ಸುನೀತಾ ಪೈ ಕಾರ್ಯಕ್ರಮ ನಿರ್ವಹಿಸಿದರು.