ಸಂಕಷ್ಟಹರ ಚತುರ್ಥಿ ಪ್ರಯುಕ್ತ ಆ.2ರಂದು ಸುಂಕದಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

0
17

ಅಳದಂಗಡಿ : ಸಂಕಷ್ಟಹರ ಚತುರ್ಥಿ ಪ್ರಯುಕ್ತ ಆಗಸ್ಟ್‌ 2ರಂದು (ಭಾನುವಾರ) ಬೆಳ್ತಂಗಡಿ ತಾಲೂಕಿನ ಸುಂಕದಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆಯಲಿವೆ.

ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಗಣಹವನ, ಅಪ್ಪ ಹಾಗೂ ಪಂಚಕಜ್ಜಾಯ ಸೇವೆ, ಭಜನಾ ಸತ್ಸಂಗ ಮತ್ತು ಮಹಾಪೂಜೆ ಸೇರಿದಂತೆ ವಿಶೇಷ ಪೂಜೆ ನೆರವೇರಲಿವೆ. ಈ ದಿನದ ಚಂದ್ರೋದಯ ರಾತ್ರಿ 9.32ಕ್ಕೆ ನಡೆಯಲಿದ್ದು, ಸಂಕಷ್ಟಹರ ಚತುರ್ಥಿ ವ್ರತ ಆಚರಿಸುವ ಭಕ್ತರು ಚಂದ್ರದರ್ಶನದ ಬಳಿಕ ವ್ರತ ಸಂಪನ್ನಗೊಳಿಸಲಿದ್ದಾರೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಅರ್ಚಕ ವರ್ಗ ಎಲ್ಲಾ ಭಕ್ತಾದಿಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಮಹಾಗಣಪತಿಯ ಕೃಪೆಗೆ ಪಾತ್ರರಾಗುವಂತೆ ಆತ್ಮೀಯ ಆಹ್ವಾನ ನೀಡಿದೆ.