ಕೈಕಂಬ : ಚಿತ್ರಕಲಾ ಸ್ಪರ್ದೆಯು ವಿದ್ಯಾರ್ಥಿಗಳಲ್ಲಿ ಯಾವುದೇ ವಿಷಯವನ್ನು ವಿಭಿನ್ನ ರೀತಿಯಲ್ಲಿ ಕಲ್ಪಿಸಿ ಚಿತ್ರಿಸುವ ಸಾಮರ್ಥ್ಯವನ್ನು ಬೆಳೆಸುವುದರ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಇದು ಕಲಿಕೆಗೆ ಪೂರಕವಾಗುತ್ತದೆ ಎಂದು ಶ್ರೀ ಗೋಕರ್ಣನಾಥ ಕಾಲೇಜಿನ ಪ್ರಾಂಶುಪಾಲರಾದ ರಘು ರಾಜ್ ಕದ್ರಿಯವರು ಹೇಳಿದರು.
ಅವರು ಗಣೇಶೋತ್ಸವದ ಪ್ರಯುಕ್ತ ಮುಂಡಾಲ ಸಮಾಜ (ರಿ) ಗುರುಪುರ ಕೈಕಂಬ ಆಯೋಜಿಸಿದ “ಎನ್ನ ಉಡಲ್ದ ಗಣಪತಿ” ಚಿತ್ರ ಕಲಾ ಸ್ಪರ್ಧೆಯಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ನುಡಿದರು.
ಅವರು ಮಾತನಾಡುತ್ತಾ, ಚಿತ್ರ ಬಿಡಿಸುವ ಸ್ಪರ್ಧೆ ಕೇವಲ ಬಣ್ಣ ಮತ್ತು ಕುಂಚಗಳ ಆಟವಲ್ಲ. ಅದು ವಿದ್ಯಾರ್ಥಿಗಳ ಕಲ್ಪನೆಗೆ ರೆಕ್ಕೆ, ಸೃಜನಶೀಲತೆಗೆ ದಾರಿ ಮತ್ತು ಆತ್ಮವಿಶ್ವಾಸಕ್ಕೆ ವೇದಿಕೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಪಾಂಗಳ ಬಾಬು ಕೊರಗರವರು ಮಾತನಾಡುತ್ತಾ, ನಮಗೆಲ್ಲರಿಗೂ ಸಮಾನತೆಗಾಗಿ ಹೋರಾಡಿದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರು ಪ್ರತಿಯೊಬ್ಬರ ಉಡಲಿನಲ್ಲೂ ಬೆಳಗಲಿ. ಮುಂದೆ ಅಂಬೇಡ್ಕರ್ ರವರ ಚಿತ್ರಸ್ಪರ್ಧೆಯೂ ನಡೆಯಲಿ ಎಂದು ಆಶಿಸಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸುರೇಶ್ ಬಲಿಪತೋಟ ಮಾತನಾಡುತ್ತಾ, ಚಿತ್ರ ಕಲಾ ಸ್ಪರ್ಧೆಯು ಮನಸ್ಸು ಮನಸ್ಸುಗಳನ್ನು ಬೆಳೆಯುತ್ತದೆ ಎಂದರು.
ವೇದಿಕೆಯಲ್ಲಿ ಸುನೀಲ್ ಕಂದಾವರ ಪದವು, ಮಂಗಳೂರು ಮಹಾನಗರ ಪಾಲಿಕೆಯ ಬಡತನ ನಿರ್ಮೂಲನಾ ಕೋಶದ ಅಧಿಕಾರಿ ಚಿತ್ತರಂಜನ್ ದಾಸ್, ಶ್ರೀನಿವಾಸ್ ಎಂ, ಮಹೇಶ್ ಅಮೀನ್ ಮುಲ್ಲಕಾಡ್, ನಾಗೇಶ್ ಕೋಟ್ಯಾನ್ ಎದುರುಪದವು , ವೆದವ್ಯಾಸ ಕುಳಾಯಿ ಉಪಸ್ಥಿತರಿದ್ದರು.
ಎನ್ನ ಉಡಲ್ದ ಗಣಪತಿ ಚಿತ್ರ ಕಲಾ ಸ್ಪರ್ಧೆ.
1 ನೇ ತರಗತಿಯಿಂದ 4 ನೇ ತರಗತಿಯವರೆಗಿನ ಸ್ಪರ್ಧೆಯಲ್ಲಿ
ಪ್ರಥಮ : ಸ. ಕಿ.ಪ್ರಾ. ಶಾಲೆ, ಕಿನ್ನಿ ಕಂಬಳದ ಗಂಗಪ್ಪ ದ್ವಿತೀಯ ಮಾಯಪ್ಪ, ತೃತೀಯ ಕು. ಹನ್ವಿಕಾ
5 ರಿಂದ 7 ನೇ ತರಗತಿಯವರೆಗಿನ ಸ್ಪರ್ಧೆಯಲ್ಲಿ ಪ್ರಥಮ ಯಶ್ವಾನ್, ದ್ವಿತೀಯ ಕು.ತನ್ವಿ, ತೃತೀಯ ಕು.ವಿಂದ್ಯಾಲಕ್ಷ್ಮೀ,
ಹೈಸ್ಕೂಲ್ ವಿಭಾಗದಲ್ಲಿ ಪ್ರಥಮ ಬಡಗ ಎಕ್ಕಾರ್ ಪ್ರೌಢಶಾಲೆಯ ಯಜ್ಞೇಶ್, ದ್ವಿತೀಯ ಕಿನ್ನಿಕಂಬಳ ಪ್ರೌಢಶಾಲೆಯ ಮಂಜುನಾಥ್, ತೃತೀಯ
ವಿಶೃತ್ ಹಾಗೂ ಕಾಲೇಜು ವಿಭಾಗದಲ್ಲಿ ಕು. ರವರು ವಿಶೇಷ ಬಹುಮಾನವನ್ನು ಪಡೆದರು.
ಅಕ್ಷತಾರವರು ಪ್ರಾರ್ಥಿಸಿದರು. ವಿಠ್ಠಲ ಆಳ್ವಾ ಪೊರ್ಕೋಡಿ ಸ್ವಾಗತಿಸಿದರು. ಜಯಂತ್ ಕೊಳಂಬೆರವರು ಧನ್ಯವಾದಗಳನ್ನು ಅರ್ಪಿಸಿದರು. ಚೇತನ್ ಕಾಜಿಲರವರು ಕಾರ್ಯಕ್ರಮ ನಿರೂಪಿಸಿದರು.

