ಆ.4ರಂದು ಸನ್ಮತಿ ಬಿಡುಗಡೆ- ಸಂವಾದ, ಪಿಎಂಎಸ್‌ಬಿವೈ ನೋಂದಣಿ

0
6

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮತಿ ಪತ್ರಿಕೆಯ ಜುಲೈ ತಿಂಗಳ ಸಂಚಿಕೆ ಬಿಡುಗಡೆ ಹಾಗೂ ಪತ್ರಕರ್ತರಿಗೆ ಪಿಎಂಎಸ್‌ಬಿವೈ(ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನಾ) ನೋಂದಣಿ ಕಾರ್ಯಕ್ರಮವನ್ನು ಆ.4ರಂದು ಬೆಳಗ್ಗೆ 11ಗಂಟೆಗೆ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ.

ಮುಖ್ಯ ಅತಿಥಿಗಳಾಗಿ ಉಡುಪಿ ಕೆನರಾ ಲೀಡ್ ಬ್ಯಾಂಕಿನ ಮುಖ್ಯ ಪ್ರಬಂಧಕ ಹರೀಶ್ ಭಾಗವಹಿಸಲಿರುವರು. ಇವರು ಬ್ಯಾಂಕುಗಳಲ್ಲಿ ಸಿಗುವ ಕೃಷಿ ಸಾಲ, ಶಿಕ್ಷಣ ಸಾಲ ಸಹಿತ ವಿವಿಧ ಸಾಲಗಳು, ಠೇವಣಿ ಯೋಜನೆಗಳು ಹಾಗೂ ಜೀವ- ಆರೋಗ್ಯ-ಅಪಘಾತ ವಿಮೆ ಕುರಿತು ಮಾಹಿತಿ ನೀಡಲಿರುವರು.

ಇದೇ ಸಂದರ್ಭದಲ್ಲಿ ಪಿಎಂಎಸ್‌ಬಿವೈ(ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನಾ)ಯ ಅರ್ಜಿಯನ್ನು ವಿತರಿಸಿ ನೋಂದಣಿಗೆ ಚಾಲನೆ ನೀಡಲಾಗುವುದು. ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ವಹಿಸಲಿರುವರು.

ಪಿಎಂಎಸ್‌ಬಿವೈ(ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ) ಅಪಘಾತ ವಿಮಾ ಯೋಜನೆಯಡಿ ಸಾವು ಸಂಭವಿಸಿದರೆ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ. ಅಂಗವೈಕಲ್ಯಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ದೊರೆಯುತ್ತದೆ. ವಾರ್ಷಿಕ ಪ್ರೀಮಿಯಂ ಕೇವಲ 20ರೂ. ರಿಸ್ಕ್ ಕವರ್- ಜೂನ್ 1ರಿಂದ ಮೇ 31. ವಯಸ್ಸಿನ ಮಿತಿ- 18-71ವರ್ಷ. ನೋಂದಣಿಗೆ ಆಧಾರ್ ಇದ್ದರೆ ಸಾಕು. ಪ್ರೀಮಿಯಂ ಮೊತ್ತ ಬ್ಯಾಂಕ್ ಅಕೌಂಟ್ ಮೂಲಕ ಆಟೋ ಡೆಬಿಟ್ ಆಗುತ್ತದೆ.

-ನಝೀರ್ ಪೊಲ್ಯ, ಪ್ರಧಾನ ಕಾರ್ಯದರ್ಶಿ
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ