ಕಾಸರಗೋಡು ಜಿಲ್ಲಾ ಕುಲಾಲ ಸಂಘದಿಂದ ಕುಲಾಲ ಆಸರೆ ಚಿಕಿತ್ಸಾ ಧನ ಸಹಾಯ ಹಸ್ತಾoತರ

0
11

ಮಂಜೇಶ್ವರ : ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ತೂಮಿನಾಡು ಆಶ್ರಯದಲ್ಲಿ ಸಹೃದಯ ಕುಲಾಲ ಬಂಧುಗಳ ಸಹಕಾರದಿಂದ ರೂಪುಗೊಂಡ ಕುಲಾಲ ಆಸರೆಯ 17ನೇ ಸೇವಾ ಯೋಜನೆಯನ್ನು ಕುಲಾಲ ಸಂಘ ಪುತ್ತಿಗೆ ಶಾಖೆಗೋಳಪಟ್ಟ ಎಯ್ಯೂರಿನ ರಾಜೇಶ್ ಕುಲಾಲ್ ರವರ ಪತ್ನಿ ರುಕ್ಮಿಣಿ ರವರ ಚಿಕಿತ್ಸೆಗೆಗಾಗಿ ಧನ ಸಹಾಯದ ಚೆಕ್ ನ್ನು ತಾರೀಕು 02-08- 2026 ರಂದು ಜಿಲ್ಲಾ ಸಂಘದ ಪ್ರಧಾನ ಕಚೇರಿಯಲ್ಲಿ ಹಸ್ತಾoತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರಾದ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಮಂಜೇಶ್ವರ ಕುಲಾಲ ಪಂಚಾಯತ್ ಶಾಖೆಯ ಅಧ್ಯಕ್ಷರಾದ ಗೋಪಾಲ ಸಾಲ್ಯಾನ್ ಕಣ್ವತೀರ್ಥ,ಪುತ್ತಿಗೆ ಕುಲಾಲ ಪಂಚಾಯತ್ ಶಾಖೆಯ ಗೌರವಾಧ್ಯಕ್ಷರಾದ ಅಮ್ಮು ಮಾಸ್ಟರ್ ಅಂಗಡಿಮೊಗರು,ಜಿಲ್ಲಾ ಕುಲಾಲ ಸಂಘದ ಕೋಶಾಧಿಕಾರಿ ಈಶ್ವರ್ ಕಣ್ವತೀರ್ಥ, ಜಿಲ್ಲಾ ಸಂಘದ ಜತೆ ಕಾರ್ಯದರ್ಶಿ ಭೋಜ ಮಾಸ್ಟರ್ ಪಾವೂರು,ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ತಾರಾನಾಥ ಕಣ್ವತೀರ್ಥ,ಆನಂದ ಕಣ್ವತೀರ್ಥ,ಪ್ರಸಾದ್ ತೂಮಿನಾಡು,ಉದಯ ಕುಮಾರ್ ಕಣ್ವತೀರ್ಥ, ಸುರೇಶ್ ಉಪಸ್ಥಿತರಿದ್ದರು.ಯೋಜನೆಯ ಯಶಸ್ವಿಗೆ ಸಹಕರಿಸಿದ ಸಹೃದಯ ಕುಲಾಲ ಬಂಧುಗಳಿಗೆ ಕಾಸರಗೋಡು ಜಿಲ್ಲಾ ಸಂಘವು ಧನ್ಯವಾದಗಳನ್ನು ಸಮರ್ಪಿಸುತ್ತದೆ.