ಆ.5ರಂದು ‘ಅಮಾತ್ಯ–ನಂದಿನಿ’ ಯಕ್ಷ ಬಯಲಾಟ; ಐರ್‌ಬೈಲು ಆನಂದ ಶೆಟ್ಟಿಯವರ ಸ್ವರ್ಣ ಸಂಭ್ರಮಕ್ಕೆ ವಿಶೇಷ ಕಾರ್ಯಕ್ರಮ

0
35

ಮುಂಬಯಿ : ಮುಂಬಯಿ ಕರಾವಳಿ ಕನ್ನಡಿಗರ ಒಕ್ಕೂಟದ ವತಿಯಿಂದ ಶ್ರೀ ಮಾರಣಕಟ್ಟೆ ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರ ಸಹಭಾಗಿತ್ವದಲ್ಲಿ ಬಡಗು ಯಕ್ಷ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ‘ಅಮಾತ್ಯ–ನಂದಿನಿ’ ಯಕ್ಷ ಬಯಲಾಟವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮವು ಆಗಸ್ಟ್‌ 5, 2026ರಂದು ಸಂಜೆ 3.30 ಗಂಟೆಗೆ ಉಲ್ಲಾಸನಗರ-3ರ ರಾಯಲ್ ಮೇರಿಡಿಯನ್ ಹಾಲ್, ರಿಜಿನ್ಸಿ ಪ್ಲಾಜಾ, ಶಾಂತಿ ನಗರ, ಕಲ್ಯಾಣ್–ಅಂಬರನಾಥ್ ರಸ್ತೆ ಉಲ್ಲಾಸನಗರ-3 ನಡೆಯಲಿದೆ.

ವಿಶೇಷವಾಗಿ, ಯಕ್ಷರಂಗದಲ್ಲಿ ಐರ್‌ಬೈಲು ಆನಂದ ಶೆಟ್ಟಿಯವರ ಸ್ವರ್ಣ ಸಂಭ್ರಮದ ಪ್ರಯುಕ್ತ ಈ ಯಕ್ಷಗಾನ ಬಯಲಾಟವನ್ನು ಹಮ್ಮಿಕೊಳ್ಳಲಾಗಿದ್ದು, ಯಕ್ಷಾಭಿಮಾನಿಗಳಿಗೆ ಮನರಂಜನೆಯ ಜೊತೆಗೆ ಸಾಂಸ್ಕೃತಿಕ ರಸದೌತಣ ಸಿಗಲಿದೆ.

ಶ್ರೀ ಮಾರಣಕಟ್ಟೆ ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರ ಅಭಿನಯದಲ್ಲಿ ಮೂಡಿಬರಲಿರುವ ‘ಅಮಾತ್ಯ–ನಂದಿನಿ’ ಪ್ರಸಂಗವು ಯಕ್ಷಗಾನ ಪ್ರಿಯರಿಗೆ ವಿಶೇಷ ಆಕರ್ಷಣೆಯಾಗಲಿದೆ.

ಕಾರ್ಯಕ್ರಮದ ವ್ಯವಸ್ಥಾಪಕರಾಗಿ ಅನಿಲ್ ಶೆಟ್ಟಿ (ವಕ್ಕೇರಿ), ಪ್ರಸನ್ನ ಶೆಟ್ಟಿ, ಪ್ರಶಾಂತ ಶೆಟ್ಟಿ (ಬೆಳ್ಳಂಪಳ್ಳಿ), ಆರ್.ಡಿ. ಉದಯ ಶೆಟ್ಟಿ, ಸುಧೀರ್ ಶೆಟ್ಟಿ, ವಂಡೈ ಸುರೇಂದ್ರ ಶೆಟ್ಟಿ (ಸರಗಮ್), ದೀಕ್ಷಿತ್ ಶೆಟ್ಟಿ, ರಘು ಶೆಟ್ಟಿ (ಕಾನ್ನಿ) ಹಾಗೂ ಜಗದೀಶ್ ಕಾರ್ಯನಿರ್ವಹಿಸುತ್ತಿದ್ದು, ಯಕ್ಷಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.