ಕರ್ನಾಟಕ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚದೆ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಶಾಲೆಗಳು ಪ್ರಾರಂಭಿಸಬೇಕು – ಪ್ರೊ|| ರೂಪೇಶ್ ಪುತ್ತೂರು

0
12

ದಾವಣಗೆರೆ : ಕನ್ನಡ ಭಾಷೆ ನಮ್ಮ ನಿಮ್ಮೆಲ್ಲರ ಮನದಾಳದಲ್ಲಿ ಇರಬೇಕು ಯಾವುದೇ ಜಾತಿ ಮತ ಭೇದವಿಲ್ಲದೆ ಕರ್ನಾಟಕ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚದೆ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಶಾಲೆಗಳು ಪ್ರಾರಂಭಿಸಬೇಕು ಶಿಕ್ಷಕರಿಗೆ ಶಿಕ್ಷಣದ ಕಾಳಜಿಯೊಂದಿಗೆ ಕನ್ನಡ ಭಾಷೆಯನ್ನು ಮಕ್ಕಳಿಗೆ, ಪೋಷಕರಿಗೆ ಮನವರಿಕೆ ಮಾಡಬೇಕಾಗಿದೆ ಇಡೀ ಭಾರತದಲ್ಲಿ ಜ್ಞಾನಪೀಠ ಪ್ರಶಸ್ತಿಗಳನ್ನು ಕರ್ನಾಟಕದಲ್ಲಿ ಎಂಟು ಹಿರಿಯ ಸಾಹಿತಿಗಳಿಗೆ ಈ ಪ್ರಶಸ್ತಿ ವಿತರಿಸಿದ್ದು ಹೆಮ್ಮೆಯ ಸಂಗತಿ ಎಂದು ಪ್ರೊ|| ರೂಪೇಶ್ ಪುತ್ತೂರು ತಮ್ಮ ಮನದಾಳದ ಮಾತುಗಳಲ್ಲಿ ಪ್ರೇಕ್ಷಕರಿಗೆ ಹಂಚಿಕೊಂಡರು.

ದಾವಣಗೆರೆಯ ಎಸ್ ನಿಜಲಿಂಗಪ್ಪ ಬಡಾವಣೆಯ ಹಿಮೋಫಿಲಿಯಾ ಸೊಸೈಟಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರೊ|| ರೂಪೇಶ್ ಪುತ್ತೂರು ಮಾತನಾಡಿದರು ವೇದಿಕೆಯಲ್ಲಿ ಉಪಸ್ಥಿತರಿದ್ದ ರಕ್ತ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಎಂ.ಎಂ. ದಡ್ಡಿ ಕೊಪ್ಪದ ಮಾತನಾಡಿ. ಪ್ರೊ|| ರೂಪೇಶ್ ಪುತ್ತೂರು ರವರು ಕನ್ನಡ ಭಾಷೆಯ ಅಭಿಮಾನದಿಂದ ಬೀದರ್ ನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತಿರುವುದು ಅವಿಸ್ಮರಣೀಯ ಕೆಲವು ಕನ್ನಡ ಸಂಘಟನೆಗಳು ಪ್ರಚಾರಕ್ಕೆ ಸೀಮಿತವಾಗುತ್ತಾರೆ ಆದರೆ ಇವರು ಯಾವುದೇ ಪ್ರಚಾರವಿಲ್ಲದೆ ಕಠಿಣ ಪರಿಶ್ರಮದಿಂದ ಸ್ವಯಂ ಪ್ರೇರಣೆಯಿಂದ ಯಾವುದೇ ಅನುದಾನವಿಲ್ಲದೆ ಸಾವಿರಾರು ಕಿಲೋಮೀಟರ್‌ಗಳಲ್ಲಿ ನಡೆದುಕೊಂಡು ಹೋಗುವದು ಆಶ್ಚರ್ಯ ಎಂದರು.

ಕನ್ನಡ ಪರ ಯಾವುದೇ ಸ್ವಾರ್ಥ ಇಲ್ಲದೆ ಸಾಧನೆ ಮಾಡುತ್ತಿರುವ ಪ್ರೊ|| ರೂಪೇಶ್ ಪುತ್ತೂರ್ ಅವರಿಗೆ ಅಭಿಮಾನದಿಂದ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯಿಂದ ಗೌರವ ಪೂರಕ ಸನ್ಮಾನಿಸಿ ಗೌರವಿಸಲಾಯಿತು. ಈ ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಡಾ ಬಿ.ಜಿ. ಅಚ್ಯುತ್, ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಸದಾಶಿವಪ್ಪ, ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್, ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್, ಕದಳಿ ಮಹಿಳಾ ವೇದಿಕೆಯ ಸದಸ್ಯರಾದ ಶ್ರೀಮತಿ ಮಮತಾ ನಾಗರಾಜ್ ಸತ್ಯಭಾಮ ನಗರದ ದಾನಿಗಳು ಹಾಗೂ ಪ್ರತಿಷ್ಠಿತ ಸ್ವಯಂ ಸೇವಾ ಸಂಸ್ಥೆಯ ಸ್ಥಾಪಕರಾದ ಪೋಪಟ್‌ಲಾಲ್ ಜೈನ್, ಜಿ.ಕೆ. ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.

ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಕಾಯನಿರ್ವಹಕರಾದ ಮಹಾಂತೇಶ್ ನಾಯಕ ಸ್ವಾಗತಿಸಿ ಅಚ್ಚುಕಟ್ಟಾಗಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.