
ವ್ಯಾಘ್ರ ಚಾಮುಂಡಿ ದೈವಸ್ಥಾನ ಮರಕಡಕರೆ ಟ್ರಸ್ಟ್ (ರಿ)ಬಡಗಮಿಜಾರು 2ನೇ ವರ್ಷದ ಆಟಿಡೊಂಜಿ ದಿನ ದಿನಾಂಕ 2-08-2026 ಆದಿತ್ಯವಾರದಂದು ಪಿಲ್ಚಂಡಿ ದೈವಸ್ಥಾನ ಮರಕಡಕರೆ ಮಿಜಾರು ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ, ಪುರುಷರು ಮಹಿಳೆಯರಿಗೆ ಹಳ್ಳಿ ಸೊಗಡಿನ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಆಟಿಯ 24 ಬಗೆಯ ವೈವಿಧ್ಯ ಖಾದ್ಯಗಳಿದ್ದವು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮರಿಯಡ್ಕ ರಮೇಶ್ ಶೆಟ್ಟಿ, ರಂಜಿತ್ ಪೂಜಾರಿ ತೋಡಾರು, ನಾರಾಯಣ ಶೆಟ್ಟಿ, ದೈವಸ್ಥಾನದ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮರಕಡಕರೆ, ಕೃಷ್ಣ ಶೆಟ್ಟಿ ಮರಕಡಕರೆ,ಉಮೇಶ್ ಶೆಟ್ಟಿ ಹೊಸಮನೆ,ಕಮಿಟಿಯ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಗಣೇಶ್ ಕೋಟ್ಯಾನ್ ನೂಯಿ ಕಾರ್ಯಕ್ರಮವನ್ನು ನಿರೂಪಿಸಿದರು.


